ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ
ಸೇಡಂ,ಎ,11: ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಅಂಗವಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಆತ್ಮೀಯತೆಯಿಂದ ತಬ್ಬಿಕೊಂಡು ಶುಭ ಕೋರಿದರು. ಈ ವೇಳೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರಾದ ಜಮೀಯತ್ ಎ ಅಹ್ಲ್ ಹದೀಸ್,ಅಬ್ದುಲ್ ನಬಿ ಸಾಬ್, ಅಬ್ದುಲ್ ಜಬ್ಬಾರ್ ಸಾಬ್, ಹಾಫಿಜ್ ಸಿರಾಜ್ ಮದ್ನಿ, ಫಯಾಜ್ ಅಹ್ಮದ್,ಅನ್ಸರ್ ಸಾಬ್,ಶಕೀಲ್ ಪೇಶೆಂಮಾಮ್ ಉಮರ್,ರಹೇಮನ್ ಗುಲಜರ್, ಬಶೀರ್ ಶೋಯೆಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.