ಮಾಣಿಕಪ್ರಭು ಕಾಲೇಜು: ಪಿಯುಸಿ ಪರೀಕ್ಷೆ, ಶೇ 95 ಉತ್ತಮ ಫಲಿತಾಂಶ
ಹುಮನಾಬಾದ್: ಏ.11:ಸಮೀಪದ ಮಾಣಿಕನಗರ ಶ್ರೀ ಮಾಣಿಕಪ್ರಭು ಶಿಕ್ಷಣ ಸಮಿತಿ ಕಾಲೇಜಿಗೆ 2023, 24 ನೇ ಸಾಲಿನ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95 ರಷ್ಟು ಉತ್ತಮ ಫಲಿತಾಂಶ ಬಂದಿದೆ.
ಪರೀಕ್ಷೆ ಬರೆದ ಒಟ್ಟು 59 ವಿದ್ಯಾರ್ಥಿಗಳಲ್ಲಿ 8 ಅಗ್ರಶ್ರೇಣಿ, 50 ವಿದ್ಯಾರ್ಥಿಗಳು ಪ್ರಥಮ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಸ್ಥಾನದಲ್ಲಿ ಪಾಸಾಗಿದ್ದಾನೆ.
ಕುಮಾರಿ ಅಂಕಿತಾ ಜಾಧವ್ ಶೇ 95, ಸಚಿನರೆಡ್ಡಿ ಶೇ 93 ಹಾಗೂ ಸುಮೀತ್ ಕುಲಕರ್ಣಿ ಶೇ 92 ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಪ.ಪೂ. ಶ್ರೀ ಡಾ. ಜ್ಞಾನರಾಜ ಪ್ರಭು, ಸಂಸ್ಥೆಯ ಅಧ್ಯಕ್ಷ ಆನಂದರಾಜ ಪ್ರಭು, ಕಾರ್ಯದರ್ಶಿ ಚಾರುದತ್ತ ಪ್ರಭು, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಮಂಗಲಾ ಆರ್. ಜಹಾಗೀರದಾರ ಹಾಗೂ ಸಿಬ್ಬಂಧಿ ವರ್ಗದವರು ಹರ್ಷವ್ಯಕ್ತ ಪಡಿಸಿ, ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.