ಹತ್ತು ವರ್ಷದಲ್ಲಿ ದೇಶದ ಸಾಲ ಹೆಚ್ಚಿಸಿರುವುದೇ  ಮೋದಿಯ ಸಾಧನೆ : ತುಕಾರಾಂ
ಸಂಜೆವಾಣಿ ವಾರ್ತೆ  
ಹಗರಿಬೊಮ್ಮನಹಳ್ಳಿ. ಏ.11 ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 54 ಲಕ್ಷ ಕೋಟಿ ಸಾಲವಿತ್ತು. ಮೋದಿ ಅಧಿಕಾರಕ್ಕೆ ಬಂದಮೇಲೆ 187 ಲಕ್ಷ ಕೋಟಿ ರೂ. ಸಾಲ ಹೆಚ್ಚಾಗಿದೆ ಎಂದು ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ ಹೇಳಿದರು    ಪಟ್ಟಣದ ಅಶೋಕ ಫಾರ್ಮ್ ಹೌಸ್ನಲ್ಲಿ ಬುಧವಾರ ಪ್ರಚಾರ  ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿ,ಮತದಾರರನ್ನು ಒಂದು ಸಲ ಮೂರ್ಖರನ್ನಾಗಿ ಮಾಡಬಹುದೇ ಹೊರತು, ಪದೇ,ಪದೇ ಮಾಡಲಾಗಲ್ಲ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ನ್ನು ಗೆಲ್ಲಿಸಲು ಮತದಾರ  ನಿರ್ಧಾರ ಮಾಡಿದ್ದಾನೆ.ನಮ್ಮ ಪಕ್ಷವನ್ನು ಗೆಲ್ಲಿಸಿದರೆ, ನಾನು ನಿಮ್ಮ ಮನೆಯ ಮಗನಾಗಿ ನಿಮ್ಮ ಋಣ ತೀರಿಸುವಂತಹ ಕೆಲಸವನ್ನು ಮಾಡುತ್ತೇನೆ. ನಾನು ತ್ರಿಬಲ್ ಗ್ರಾಜೆಟ್ ಮಾಡಿದ್ದೇನೆ. ನನಗೆ ಅಂಕೆ  ಸಂಖ್ಯೆ ಸಮೇತ ವ್ಯವಹಾರದ  ಜ್ಞಾನವಿದೆ. ಮೋದಿ ಏನು ಓದಿದ್ದಾರೆ ಎಂಬುದು ಬಹಿರಂಗಪಡಿಸಲಿ ಆಗ ಗೊತ್ತಾಗುತ್ತೆ ಅವರ ಅಸಲಿ ಮುಖವಾಡ  ಹತ್ತು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 190 ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ. ಇವರನ್ನು ಈಗೇ ಬಿಟ್ಟರೇ ಮುಂದೆ ದೇಶವನ್ನು ಮಾರಿದರೂ, ಮಾರಬಹುದು
 ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಟ್ಟಿದ್ದಾರೆ? ಎಷ್ಟು ರೈತರ ಸಾಲ ಮನ್ನಾ ಮಾಡಿದ್ರೀ? ಮಹಿಳೆಯರ,ಮಕ್ಕಳ, ಬಡವರ ಕಲ್ಯಾಣಕ್ಕಾಗಿ ಏನು ಮಾಡಿದ್ದೀರಿ? ಎಂದು ಕಾರ್ಯಕ್ರಮದಲ್ಲಿ  ನೇರವಾಗಿ ಪ್ರಧಾನಿಯವರನ್ನೆ ಕಾಂಗ್ರೆಸ್ ಅಭ್ಯರ್ಥಿ ಪ್ರಶ್ನಿಸಿದರು.
ನೀವು ಹೇಳುತ್ತೀರುವ ಅಚ್ಛೇದಿನ ಎಲ್ಲಿದೆ? ಜನರು ನರಳುತ್ತೀದ್ದಾರೆ. ದೇಶವನ್ನು ಬರ್ಬದ್ ಮಾಡುತ್ತೀದ್ದೀರಿ. ಜನಸಾಮಾನ್ಯರ ಬದುಕು ಅತ್ಯಂತ ದುಸ್ತರವಾಗಿದೆ. ಜನರಿಗಿಂತಲೂ ಅದಾನಿ,ಅಂಬಾನಿಗಳ ಸಿರಿವಂತಿಕೆ ಏರಿಕೆಗಾಗಿಯೇ ನೀವು ಕಂಕಣ ಬದ್ಧರಾಗಿದ್ದೀರಿ.
ಕಲ್ಯಾಣ ಕರ್ನಾಟಕಕ್ಕೆ 371ಜೆ ನೀಡಲು  ಬಿಜೆಪಿ ಸರ್ಕಾರ ಎಲ್ ಕೆ ಅಡ್ವಾಣಿ  ಹಿಂದೇಟು ಹಾಕಿತು. ಆದರೇ 2004ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಮ್ಮ ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ 371ಜೆ ನೀಡಿತು. ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಯಾವತ್ತೂ ಕೈಜೋಡಿಸಿದೆ. 18 ವರ್ಷದ ಯುವಕರಿಗೆ ಮತದಾನ ಹಕ್ಕ, ದೇಶದಲ್ಲಿ ಮೀಸಲಾತಿ ನೀಡಿದ್ದು ಕಾಂಗ್ರೆಸ್  60 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ಇತಿಹಾಸ ಗೊತ್ತಿದೆ ಇತಿಹಾಸ ಗೊತ್ತಿದ್ದವರು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ಮೋದಿ ಹೆಸರೇಳಿ ಓಟು ಹಾಕಿಸಿಕೊಂಡು ಹೋದವರು 10 ವರ್ಷ ಬಳ್ಳಾರಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು
 ಮಾಜಿ ಶಾಸಕ ಕೆಎಂಎಫ್ ರಾಜ್ಯಾಧ್ಯಕ್ಷ ಎಸ್ ಭೀಮನಾಯ್ಕ್ ಮಾತನಾಡಿ  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯಿಂದ ಮತದಾರರ ಮನ ಗೆದ್ದಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ತುಕಾರಾಂ ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂದರು.
 ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶಿವಯೋಗಿ, ಪ್ರಚಾರ ಸಮಿತಿಯ ಅಧ್ಯಕ್ಷ ನಂದಿಬಂಡಿ ಸೋಮಣ್ಣ ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಕುರಿ  ಶಿವಮೂರ್ತಿ, ಹೆಗ್ದಾಳ್ ರಾಮಣ್ಣ, ಅಂಬಾಡಿ ನಾಗರಾಜ ಹಲ್ದಾಳ್ ವಿಜಯ್ ಕುಮಾರ್ ಹಂಪಾಪಟ್ಟಣದ ಭೀಮಣ್ಣ, ರೋಗಾಣಿ ಹುಲುಗಪ್ಪ, ನೆಲ್ಕುದ್ರಿ ಚಂದ್ರಪ್ಪ, , ಕೊಟ್ಟೂರಿನ ಶಿವಣ್ಣ, ಯಶೋಧ ಮಂಜುನಾಥ, ಡಿಶ್ ಮಂಜುನಾಥ, ಗುರು ಮಲ್ಲಿಕಾರ್ಜುನ, ಬುಡನ್ ಸಾಬ್ ಹುಡೆದ್ ಗುರು ಬಸವರಾಜ್ ಶಿವ ಚರಣ,ಕೆ.ಮೈಲಾರಪ್ಪ, ಪವಾಡಿ ಹನುಮಂತಪ್ಪ, ಅಕ್ಕಿ ತೋಟೇಶ್, ಬಾನಮ್ಮ ವಕೀಲರಾದ ಬಿವಿ ಶಿವಯೋಗಿ. ಮರಿಯಮ್ಮನಹಳ್ಳಿ ಸತ್ಯಣ್ಣ, ಚಿರಬಿ  ಕೊಟ್ರೇಶ್, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದ್ವಾರಕೇಶ್   ಪುರಸಭೆಯ ಸದಸ್ಯರಾದ ಮರಿ ರಾಮಪ್ಪ ರಾಜೇಶ್ ಬ್ಯಾಡಗಿ, ಅಲ್ಲಾಭಕ್ಷಿ  ಹುಚ್ಚಪ್ಪ, ಇತರರಿದ್ದರು
 ಕಾರ್ಯಕ್ರಮದ ಸ್ವಾಗತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿ ಬಸಪ್ಪ, ಪತ್ರೇಶ್ ಹಿರೇಮಠ್  ನಿರ್ವಹಿಸಿದರು