ಆಂತರಿಕ ಶುದ್ಧಿಗೆ ಪ್ರೇರಕ ರಂಜಾನ್ ಹಬ್ಬ ಸಡಗರದಿಂದ ಆಚರಣೆ
ಚಿಟಗುಪ್ಪ:ಏ.11: ಚೆಟಗುಪ್ಪ ಪಟ್ಟಣದಲ್ಲಿ ರಂಜಾನ್ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಲಾಯಿತು ವಿಶ್ವದ್ಯಂತ ಹರಡಿರುವ ಇಸ್ಲಾಂಮ್ ಧರ್ಮವು ಅವಲಂಬಿಸಿರುವ ಐದು ಅಚಲ ಸ್ತಂಭಗಳೆಂದರೆ ಕಲಿಮ ನಮಾಜ ಉಪವಾಸ ವ್ರತ ಜಕಾತ ಮತ್ತು ಹಜ್ಜ್ ಯಾತ್ರೆ ಒಬ್ಬ ಸತ್ಯನಿಷ್ಠೆ ಮುಸಲ್ಮಾನನು ಈ ಪಂಚ ಕರ್ಮಗಳಲ್ಲಿ ಯಾವ ಕರ್ಮವನ್ನು ಅಲಕ್ಷಿಸುವಂತಿಲ್ಲ ಬಂದು ವೇಳೆ ಅಲಕ್ಷಿಸಿದರೆ ಅವನು ಪರಿಪೂರ್ಣ ಮುಸಲ್ಮಾನ ಆಗಲು ಸಾಧ್ಯವಿಲ್ಲ. ಮೊದಲನೆಯ ಅಥವಾ ಮೂಲ ಕರ್ಮವೇ ಕಲಿಮ ಆಗಿದೆ ರಂಜಾನ್ ತಿಂಗಳಿನ ಮೂವತ್ತು ದಿನದ ಉಪವಾಸವು ನಮಾಜಿನ ನಂತರ ಮಹತ್ವಪೂರ್ಣವಾದ ಕಡ್ಡಾಯ ಕರ್ಮವಾಗಿದೆ ಸುರ್ಯೋದಯದಿಂದ ಸೂರ್ಯಾಸ್ತದವರೆಗೂ ಅನ್ನ ಪಾನೀಯ ಸೇವೆನೆಗಳಿಂದ ದೂರ ಉಳಿಯುವುದು ಪುಮುಖ ಷರತ್ತಾಗಿದೆ