ಹಬೋಹಳ್ಳಿ : ಶ್ರೀ ವಿದ್ಯಾನಿಕೇತನ ವಿಜ್ಞಾನ  ಕಾಲೇಜಿನ ಯಶವಂತ್ ಜಿಲ್ಲೆಗೆ ಪ್ರಥಮ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಏ.11 ಪಟ್ಟಣದ ಶ್ರೀ ವಿದ್ಯಾನಿಕೇತನ ಪಿಯುಸಿ ಕಾಲೇಜ್ ವಿಜ್ಞಾನ ವಿಭಾಗದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ.
 ಕಾಲೇಜಿನ ವಿದ್ಯಾರ್ಥಿ ಯಶ್ವಂತ್ (592 ) ಶೇಕಡ 98.67 ಅಂಕಗಳನ್ನು ಪಡೆಯುವ ಮೂಲಕ ಇಡೀ ಬಳ್ಳಾರಿ ಅಖಂಡ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಕಾಲೇಜಿನ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲರಾದ ಶರತ್ ಚಂದ್ರ ತಿಳಿಸಿದ್ದಾರೆ.
 ಉಳಿದ ಕಾಲೇಜಿನ ವಿದ್ಯಾರ್ಥಿಗಳಾದ ವಿ ನಾಗ ದೀಪಿಕಾ (589 ) ಯಲ್ಲಾಪುರ ಮಣಿಕಂಠ (587 ) ಎಂ ಕೆ ವರ್ಷ (585 ) ಹನುಮಂತ ಗೌಡ (585 ) ಬಿಜೆ ಸೃಜನ್( 585 ) ಎಚ್ ಎಚ್ ಪ್ರಜ್ವಲ್( 582 ) ಎಚ್ ಅನುರಾಧ (582 ) ಪಿಪಿ ವಿಜಯಲಕ್ಷ್ಮಿ (582 ) ಕೆ ರಾಕೇಶ (581 ) ಅಂಕಗಳನ್ನು ಪಡೆದಿದ್ದಾರೆ
 ಕಾಲೇಜಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 315 ಅದರಲ್ಲಿ 176 ವಿದ್ಯಾರ್ಥಿಗಳು ಡಿಸ್ಟೆಂಕ್ಷನ್  ಪಡೆದಿದ್ದು. 130 ವಿದ್ಯಾರ್ಥಿಗಳು ಪ್ರಥಮ ದರ್ಜೆ ಸ್ಥಾನದಲ್ಲಿ ಫಲಿತಾಂಶ ಪಡೆದಿದ್ದಾರೆ ಒಟ್ಟಾರೆ 99.04 ರಷ್ಟ  ಬಂದಿದೆ ಎಂದು ತಿಳಿಸಿರುತ್ತಾರೆ .