ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ: ಮಿಶ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.11: ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ನಾಳೆ ಅಧಿಸೂಚನೆ ಹೊರಡಿಸಲಿದ್ದು ನಾಮಪತ್ರ ಸಲ್ಲಿಕೆ ಕಾರ್ಯ ನಾಳೆಯಿಂದ ಆರಂಭಗೊಳ್ಳಲಿದೆಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಹೇಳಿದ್ದಾರೆ.
ಅವರಿಂದು ತಮ್ಮ ಕಚೇರಿಯಲ್ಲಿ  ಸುದ್ದಿಗೋಷ್ಟಿ ನಡೆಸಿ. ಏ.19 ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. 20 ರಂದು  ನಾಮ ಪತ್ರಗಲಕ ಪರಿಶೀಲನೆ ನಡೆಯಲಿದ್ದು. ಏ.22 ನಾಮಪತ್ರ ಹಿಂದಕ್ಕೆ ಪಡೆಯಲು  ಕೊನೆದಿನವಾಗಿದೆ.
ಮೇ.7 ರಂದು ಮತದಾನ‌ ನಡೆಯಲಿದೆ. ಕ್ಷೇತ್ರದಲ್ಲಿ 9,51,522 ಮಹಿಳಾ, 268 ಇತರೇ ಸೇರಿ 18, 77,751 ಮತದಾರರು ಇದ್ದು. ಮತದಾನಕ್ಕೆ 1972 ಮತಗಟ್ಟಿ ಸ್ಥಾಪಿಸುತ್ತಿದೆ.
53 ಸಾವಿರದ 169 ಯುವ, 85 ವರ್ಷ ಮೇಲ್ಪಟ್ಟ 13285 ಮತದಾರರು ಇದ್ದಾರೆ. ಈವರೆಗೆ ಕ್ಷೇತ್ರದಲ್ಲಿ 9.32 ಕೋಟಿ ರೂ ನಗದು ವಶಪಡಿಸಿಕೊಂಡಿದೆಂದರು.
ಎಸ್ಪಿ ರಂಜಿತ್ ಕುಮಾರ್ ಮಾತನಾಡಿ ಇತ್ತೀಚೆಗೆ ಚಿನ್ನದ ವ್ಯಾಪಾರಿ ನರೇಶ್ ಸೋನಿ ಅವರ ಬಳಿ 5.60 ಕೋಟಿ ಹಣದ ಮೂಲದ ಬಗ್ಗೆ ತಪಾಸಣೆ ನಡೆಯುತ್ತಿದೆಂದರು.