ಖಾಸಗಿ ವ್ಯಕ್ತಿಗಳು ಅನಧೀಕೃತವಾಗಿ ಸರ್ಕಾರಿ ಜಾಗವನ್ನು ಕಬಳಿಸುತ್ತಿರುವ ವಿರುದ್ಧ ಎಬಿವಿಪಿ ಪ್ರತಿಭಟನೆ
ಬೀದರ್:ಏ.11:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ವತಿಯಿಂದ ಒತ್ತಾಯಿಸುವುದೇನೆಂದರೆ, ಬೀದರ ನಗರದ ಮೈಲೂರಿನ ಸರಕಾರಿ ಪಾಲೀಟೇಕ್ನಿಕ್ ಕಾಲೇಜಿಗೆ ಸೇರಿರುವ ಜಾಗದ ಸುತ್ತುಗೊಡೆ ಒಡೆದು ಖಾಸಗಿ ವ್ಯಕ್ತಿಗಳು ಅನಧೀಕೃತವಾಗಿ ಜಾಗವವನ್ನು ಕಬಳಿಸಿದ್ದಾರೆ. ಈ ಜಾಗವನು ಕಬಳಿಸಿಕೊಂಡು ಖಾಸಗಿ ವ್ಯಕ್ತಿಗಳು ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಆದ್ದರಿಂದ ತಾವುಗಳು ಕೂಡಲೇ ಅನಧೀಕೃತವಾಗಿ ಕಬಳಿಸಿಕೊಂಡಿರುವ ಜಾಗವನ್ನು ಕೂಡಲೇ ಖಾಲಿಮಾಡಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಸುರಕ್ಷತೆಯ ಹಿತದೃಷ್ಟಿಯಿಂದ ಸುತ್ತುಗೊಡೆ ನಿರ್ಮಿಸಿಕೊಡಬೇಕ ತಪ್ಪಿಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ಘಟಕದ ವತಿಯಿಂದ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಒಂದು ವೇಳೆ ಈ ನಮ್ಮ ಮನವಿಗೆ ಸ್ಪಂದನೇ ಮಾಡದೇ ಹೋದಲ್ಲಿ ತರಗತಿಗಳನ್ನು ಭಹಿಷ್ಕರಿಸಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಶಶಿಕಾಂತ್ ರಾಕ್ಲೆ ಜಿಲ್ಲಾ ಸಂಚಾಲಕ,ಸಂಘಟನಾ ಕಾರ್ಯದರ್ಶಿ ಹೇಮಂತ್ ,ಓಂ ಸಾಯಿ,ಪವನ್ ಕುಂಬಾರ್ ,ಅಭಿಷೇಕ್ ಶಂಬು ವಿನಾಯಕ್ ಸಾಯಿ ಚರಣ ಅಂಕಿತ ವಿವೇಕ್ ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು