ಮಹಿಳಾ ಸಬಲೀಕರಣಕ್ಕೆ ಬಿಜೆಪಿ ಕೊಡುಗೆ ಅಪಾರ: ಭಾರತಿ ಶೆಟ್ಟಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.11: ಈ ಲೋಕಸಭಾ ಕ್ಷೆತ್ರದಲ್ಲಿ ಶೇ 52 ರಷ್ಟು ಮಹಿಳಾ ಮತದಾರರು ಇದ್ದಾರೆ. ಮಹಿಳಾ ಸಬಲೀಕರಣಕ್ಕೆ  ಕೇಂದ್ರದ ಬಿಜೆಪಿ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದ್ದಾರೆ‌ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ದೇಶದ ಮಹಿಳೆಯರಿಗೆ ಶೇ‌ 33 ರಷ್ಟು ಮೀಸಲಾತಿ ಕಲ್ಪಿಸಲು ಮುಂದಾಗಿದ್ದಾರೆ.
ಬಡ್ಡಿರಹಿತ ಸಾಲ ನೀಡಿದ್ದಾರೆ‌  ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ಧರದಲ್ಲಿ ಭದ್ರತೆ ಇಲ್ಲದೆ ಸಾಲ ನೀಡುತ್ತಿದೆ. ಮುದ್ರ ಯೋಜನೆಯಲ್ಲಿ  ಶೇ. 69 ಸಾಲವನ್ನು ಮಹಿಳೆಯರಿಗೆ ನೀಡಿದೆ ಒಟ್ಟಾರೆ ಮಹಿಳೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆಂದರು‌.
ಸುದ್ದಿಗೋಷ್ಟಿಯಲ್ಲಿ  ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಪಾಲಿಕೆ ಸದಸ್ಯೆ ಸುರೇಖ ಮಲ್ಲನಗೌಡ, ಜಿಲ್ಲಾ ಅಧ್ಯಕ್ಷೆ ಸುಗುಣ, ಭಾಗ್ಯಲಕ್ಷ್ಮಿ,  ಪಕ್ಷದ ಮುಖಂಡರಾದ ಸುಮಾರೆಡ್ಡಿ ಮೊದಲಾದವರು ಇದ್ದರು.