ಪಂಚಾಂಗ ಶ್ರವಣ ಕಾರ್ಯಕ್ರಮ
‌ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.11: ರಾಘವ ಮೆಮೋರಿಯಲ್ ಅಸೋಶಿಯೇಶನ್, ವತಿಯಿಂದ *ಪಂಚಾಂಗ ಶ್ರವಣ ಕಾರ್ಯಕ್ರಮವನ್ನು
ಮಂಗಳವಾರ ಸಂಜೆ 6-30 ಗಂಟೆಗೆ, ರಾಘವ ಕಲಾ ಮಂದಿರದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಕ್ರೋಧಿನಾಮ ಸಂವತ್ಸರ ನೂತನ ವರ್ಷದ ಶುಭ ಸಂದರ್ಭದಲ್ಲಿ ನಗರ ನಾಗರೀಕರಿಗೆ ಯುಗಾದಿಯ ಶುಭಾಶಯಗಳು ಕೋರಿದರು.
ಪಂಚಾಂಗ ಕರ್ತ ಬಳ್ಳಾರಿಯ ನಾಗಲ ಕೇರಿ ನಿವಾಸಿಗಳಾದ ಡಾಕ್ಟರ್ ಎ ಮಹೇಶ್ ಶರ್ಮಾ ಮತ್ತು ಸಂಸ್ಥೆಯ ಗೌರವಾಧ್ಯಕ್ಷ ಕೆ ಚನ್ನಪ್ಪ ಅಧ್ಯಕ್ಷರಾದ ಕೆ ಕೊಟೆಶ್ವರ ರಾವ್ ಉಪಾಧ್ಯಕ್ಷರಗಳಾದ  ಹೆಚ್ ವಿಷ್ಣುವರ್ಧನ್ ರೆಡ್ಡಿ ಗೌರವ ಕಾರ್ಯದರ್ಶಿ ಎನ್ ಪ್ರಕಾಶ್ ಮತ್ತು ಜಂಟಿ ಕಾರ್ಯದರ್ಶಿ ಎಂ ರಾಮಾಂಜನೇಯಲು ಎಲ್ಲರೂ ಸೇರಿ ರಾಮನ ಫೋಟೋಗೆ ಪೂಜೆ ಸಲ್ಲಿಸಿ  ನೂತನ ವರ್ಷದ ಯುಗಾದಿ ಪಂಚಾಂಗ ಪಠಣ ಕಾರ್ಯಕ್ರಮ ಆಚರಿಸಲಾಯಿತು. ಡಾಕ್ಟರ್ ಎ ಮಹೇಶ್ ಶರ್ಮಾ ರವರು ಈ ವರ್ಷದ ರಾಶಿ ಪಲಗಳ ಬಗ್ಗೆ ಮತ್ತು ಮಳೆ ಮತ್ತು ರಾಜಕೀಯ ಬಗ್ಗೆ ವಿವರಣೆ ನೀಡಿದರು.ತದನಂತರ ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು,ಅಜೀವ ಸದ್ಯಸರು, ಕಲಾಭಿಮಾನಿಗಳೆಲ್ಲರಿಗೂ ಭಾಗವಹಿಸಿದ್ದರು.