ಡೈಮಂಡ್ ದ್ವಿತೀಯ ಪಿ.ಯು.ಸಿ ಅದ್ಭುತ ಫಲಿತಾಂಶ
ಭಾಲ್ಕಿ:ಏ.11:ಡೈಮಂಡ್ ಗ್ರುಪ್ ಆಫ್ ಇನ್ಸ್ಟಿಟ್ಯುಶನ್‍ನ 2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆಗೈದು ರಾಜ್ಯಕ್ಕೆ 10ನೇ ಮತ್ತು 11ನೇ ರ್ಯಾಂಕ್ ಹಾಗೂ ಕಲಬುರ್ಗಿ ವಿಭಾಗದಲ್ಲಿಯೇ ಪ್ರಥಮ ಸ್ಥಾನದಲ್ಲಿ ಮತ್ತು ಬೀದರ ಜಿಲ್ಲೆಗೆ ಅಗ್ರಗಣ್ಯರೆನಿಸಿದ್ದಾರೆ.
ಭಾಲ್ಕಿ ತಾಲೂಕಿನ ಹಲವಾರು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿದ್ದು ಕನ್ನಡ, ಮರಾಠಿ, ಉರ್ದು ಮತ್ತು ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರೂ ಕೂಡ ಅತ್ಯುತ್ತಮ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ ಹಾಗೂ ಭಾಲ್ಕಿ ತಾಲೂಕಿನ ಹೆಸರು ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.