ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗ್ರಾಮ ಲೆಕ್ಕಿಗನಿಗೆ 3 ವರ್ಷ ಜೈಲು ಶಿಕ್ಷೆ
ಬೀದರ್:ಏ.11: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗ್ರಾಮ ಲೆಕ್ಕಿಗನಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ 40 ಸಾವಿರ ರೂ. ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಬೆಟಬಾಲಕುಂದಾ ಅಯ್ಯುಬ್ ಖಾನ್ ಅಯ್ಯುಬ್ ಖಾನ್ ಲಂಚ ಪಡೆದು ಶಿಕ್ಷೆಗೆ ಗುರಿಯಾದ ಗ್ರಾಮ ಲೆಕ್ಕಿಗ.
2021ರ ಜ. 19 ರಂದು ಬೆಟಬಾಲಕುಂದಾ ಗ್ರಾಮದ 6.38 ಎಕರೆ ಭೂಮಿ ಫೆÇೀಡಿ ಕೆಲಸಕ್ಕಾಗಿ ಮೊಹಮ್ಮದ್ ಖಾನ್ ಶೇರ್ ಖಾನ್ ಅವರಿಂದ 2200 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೆÇಲೀಸರು ದಾಳಿ ನಡೆಸಿದ್ದರು.
ಅಂದಿನ ಲೋಕಾಯುಕ್ತ ಪೆÇಲೀಸ್ ನಿರೀಕ್ಷಕ ಆರ್. ಎಸ್ ಜಾಗೀರದಾರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಟೆಸಿದ ನ್ಯಾಯಾಧೀಶರಾದ ವಿಜಯಕುಮಾರ ಆನಂದಶೆಟ್ಟಿ ಅವರು ಆರೋಪ ಸಾಬೀತಾದ ಹಿನ್ನಲೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕೇಶವರಾವ್ ಶ್ರೀಮಾಳೆ ವಾದ ಮಂಡಿಸಿದ್ದರು.