ದ್ವಿತೀಯ ಪಿಯು ಫಲಿತಾಂಶ ಸಂದೀಪ್. ಎನ್ ಗೆ ರಾಜ್ಯಕ್ಕೆ 8ನೇ  ಱ್ಯಾಂಕ್
ಸಂಜೆವಾಣಿ ವಾರ್ತೆ
ಬಳ್ಳಾರಿ,ಏ.11: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಗೊಂಡ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿ ಸಂದೀಪ್.ಎನ್ 600ಕ್ಕೆ 588 ಅಂಕ ಗಳಿಸುವ ಮೂಲಕ ಶೇ.98 % (ಡಿಸ್ಟಿಂಕ್ಷನ್) ರಾಜ್ಯಕ್ಕೆ 8ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.
ಕನ್ನಡ (99), ಸಂಸ್ಕೃತ(98), ಐಚ್ಚಿಕ ಕನ್ನಡ (99), ಇತಿಹಾಸ (98), ರಾಜ್ಯಶಾಸ್ತ್ರ (95), ಶಿಕ್ಷಣ (99) ವಿವಿಧ ವಿಷಯಗಳಲ್ಲಿ ಅಂಕ ಗಳಿಸಿದ್ದಾನೆ.
ಬಳ್ಳಾರಿ ತಾಲ್ಲೂಕಿನ ಹಿರೇಹಡ್ಲಿಗಿ ಗ್ರಾಮದ ಗಾದಿಲಿಂಗಪ್ಪ.ಎನ್  – ಹನುಮಕ್ಕ.ಎನ್ ದಂಪತಿಯ ನಾಲ್ಕನೇ ಪುತ್ರನಾಗಿದ್ದು,   ವಿದ್ಯಾರ್ಥಿಯ ಪೋಷಕರು ಕೃಷಿ ಕುಟುಂಬದವರಾಗಿದ್ದು, ಅತಿಹೆಚ್ಚು ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾನೆ.
ಈ ಸಾಧನೆಗೆ ಕಾಲೇಜಿನ ಸಿಬ್ಬಂದಿ ಮತ್ತು ಗ್ರಾಮಸ್ಥರು, ಪೋಷಕರು, ಸ್ನೇಹಿತರು ವಿದ್ಯಾರ್ಥಿಗೆ  ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.