ಪಿಯು ಫಲಿತಾಂಶಬೆಸ್ಟ್ ಕಾಲೇಜ್ ನ ಪ್ರದೀಪ್ ಪಾಟೇಲ್ ಗೆ ವಿಜ್ಞಾನದಲ್ಲಿ 588, ಭುವನ್ ಗೆ ವಾಣಿಜ್ಯದಲ್ಲಿ 586
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.11:  ದ್ವಿತೀಯ ಪಿ.ಯು.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ನಗರದ (ಬೆಸ್ಟ್) ಬಳ್ಳಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಬಳ್ಳಾರಿಯ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಕಾಲೇಜಿನ ಒಟ್ಟು 700 ವಿದ್ಯಾರ್ಥಿಗಳ ಶೇಕಡಾವಾರು ಫಲಿತಾಂಶ 96.5% ಆಗಿರುತ್ತದೆ. ಇದರಲ್ಲಿ 210  ಡಿಸ್ಟಿಂಕ್ಷನ್, 415  ಪ್ರಥಮ ದರ್ಜೆ ಮತ್ತು 51 ದ್ವಿತೀಯ ದರ್ಜೆ ಹೊಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಪ್ರದೀಪ್ ಪಾಟೀಲ್ 588/600, ಮಧುಮತಿ – 582, ಕೆ. ತೇಜು – 582, ಬಸವಲೀಲಾ 578/600, ಆದರ್ಶ- 577/600, ಅನಿಲ್ ಕುಮಾರ್- 577/600, ಇಂದುಧರ-577/600, ವಿನುತಾ.ಎಂ-576/600, ಪಾಟೀಲ್ ಸವಿತಾ.ಎಂ- 574/600, ಮಣಿಕಂಠ.ಎಸ್-572/600, ನಾಗರಾಜ್-571/600 ಹಾಗೂ ವಾಣಿಜ್ಯ ವಿಭಾಗದಲ್ಲಿ ಭುವನ್-586/600, ಯಂಕನಗೌಡ ಮೇಟಿ-576/600, ಮುಂತಾದವರು ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡು ಅತ್ಯುತ್ತಮ ಪ್ರತಿಭೆ ತೋರಿಸಿದ್ದಾರೆ. ಗಣಿತಶಾಸ್ತ್ರದಲ್ಲಿ 12, ರಸಾಯನಶಾಸ್ತ್ರದಲ್ಲಿ 06, ಗಣಕ ವಿಜ್ಞಾನದಲ್ಲಿ 07, ಭೌತಶಾಸ್ತ್ರದಲ್ಲಿ 03,  ಸಂಸ್ಕೃತದಲ್ಲಿ 06, ಲೆಕ್ಕಶಾಸ್ತ್ರದಲ್ಲಿ 02, ಅರ್ಥಶಾಸ್ತ್ರ 02, ವ್ಯವಹಾರ ಅಧ್ಯಯನ 02, ಇಷ್ಟು ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಗಳಿಸಿರುತ್ತಾರೆ, 550 ಕ್ಕಿಂತಲೂ ಹೆಚ್ಚು ಅಂಕಗಳನ್ನು 138 ವಿದ್ಯಾರ್ಥಿಗಳು ಪಡೆದಿರುತ್ತಾರೆ. ಎಂದು ಕಾಲೇಜಿನ ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್ ತಿಳಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಬೆಸ್ಟ್ ಸಂಸ್ಥೆಯ ಅಧ್ಯಕ್ಷರಾದ ಕೋನಂಕಿ ರಾಮಪ್ಪನವರು ಹಾಗೂ ಉಪಾಧ್ಯಕ್ಷರಾದ ಕೋನಂಕಿ ತಿಲಕ್‍ಕುಮಾರ್, ಕಾರ್ಯದರ್ಶಿಗಳಾದ ಮನ್ನೆ ಶ್ರೀನಿವಾಸುಲು, ಕಾಲೇಜು ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯರಾದ ಜಿ. ಶ್ರೀನಿವಾಸರೆಡ್ಡಿ ಮತ್ತು ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.