ಎ.ಆರ್.ಓ ಕಚೇರಿ ಹಾಗೂ ಚೆಕ್ ಪೋಸ್ಟ್ ಗಳಿಗೆ ವೆಚ್ಚ ವೀಕ್ಷಕಿ ಪ್ರಜಕ್ತ ಪಿ ಠಾಕೂರ್ ಭೇಟಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಏ.೧೧: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಪ್ರಜಕ್ತ ಪಿ ಠಾಕೂರ್ ಇತ್ತೀಚಿಗೆ ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಎಆರ್‍ಓ (ಸಹಾಯಕ ಚುನಾವಣಾಧಿಕಾರಿ) ಹಾಗೂ ಎಇಓ (ಸಹಾಯಕ ಚುನಾವಣಾ ವೆಚ್ಚ ಅಧಿಕಾರಿ)ಗಳಿಂದ ಅಭ್ಯರ್ಥಿಗಳ ಚುನಾವಣೆ ವೆಚ್ಚಕ್ಕೆ ಸಂಬಂದಿಸಿದ ಬಿ-13 ಹಾಗೂ ಸಿ-1 ನಮೂನೆಗಳನ್ನು ಪರಿಶೀಲಿಸಿದರು.ಏಪ್ರಿಲ್ 6 ರಂದು ಮೊಳಕಾಲ್ಮೂರು ತಾಲ್ಲೂಕಿನ ಕಣಕುಪ್ಪೆ, ಎದ್ದಲಬೊಮ್ಮನಹಟ್ಟಿ, ಉಡೇವು ಚೆಕ್‍ ಪೋಸ್ಟ್ ಗಳಿಗೆ ಭೇಟಿ ನೀಡಿದ ಚುನಾವಣಾ ವೆಚ್ಚ ವೀಕ್ಷಕಿ ಪ್ರಜಕ್ತ ಠಾಕೂರ್ ಎಲ್ಲಾ ಖಾಸಗಿ ಹಾಗೂ ಸಮೂಹ ಸಾರಿಗೆ ವಾಹನಗಳನ್ನು ತಪ್ಪದೇ ಪರಿಶೀಲನೆ ನಡೆಸಬೇಕು ಎಂದು ಚೆಕ್‍ಪೆÇಸ್ಟ್ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಚೆಕ್ ಪೋಸ್ಟ್ ಭೇಟಿ ನೀಡಿದ ಹಿರಿಯ ಅಧಿಕಾರ ವಿವರಗಳನ್ನು ಪರಿಶೀಲನೆ ನೆಡೆಸಿದರು.