ಹೂವು ಪೋಣಿಸಿದ ದಾರದಂತೆ ಜೀವನ ನಡೆಸಿ:ಶಂಕರಗೌಡ ಬಿರಾದಾರ
ಬಸವನಬಾಗೇವಾಡಿ:ಸೆ.೨೦:ಹೂಗಾರ ಮಾದಯ್ಯ ೧೨ ನೇಯ ಶತಮಾನದಲ್ಲಿ ಬಸವಣ್ಣನವರ ಜೊತೆಗೂಡಿ ಶರಣರಿಗೆ ಹೂವು ಪತ್ರಿಗಳನ್ನು ಪೂರೈಸುವ ಕಾರ್ಯ ಕೈಗೊಂಡಿದ್ದರು.ಅವರ ಆದರ್ಶಗಳನ್ನು ಪಾಲಿಸುತ್ತ ಸಮಾಜದಲ್ಲಿ ಹೂವು ಪೋಣಿಸಿದ ದಾರದಂತೆ ಬಾಳಬೇಕು ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು
ಪಟ್ಟಣದ ವೀರ ರಾಣಿ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹೂಗಾರ ಮಾದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಹೂಗಾರ ಮಾದಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಶರಣರ ಕಾಯ ಮತ್ತು ಕಾಯಕವೆರಡು ಕೈಲಾಸವೆಂದು ಜನಪದ ಹಾಡಿನ ಮೂಲಕ ಮಾದಯ್ಯನವರನ್ನು ಬಣ್ಣಿಸಿದರು.
ಬಸವಣ್ಣವರ ಸಮಕಾಲೀನಲ್ಲಿ ಜನ್ಮ ತಾಳಿದ ಹೂಗಾರ ಮಾದಯ್ಯ ಬದುಕು,ಜೀವನ,ಕಾರ್ಯಕ್ಷಮತೆ ಸಮಾಜಕ್ಕೆ ಸಂದೇಶವಾಗಿದೆ ಹನ್ನೆರಡನೆಯ ಶತಮಾನದ ಶರಣರು ಸಮಾಜಕ್ಕೆ ಪ್ರೇರಣೆಕೊಟ್ಟಿದ್ದಾರೆ ಶರಣ ಹೂಗಾರ ಮಾದಯ್ಯ ಹಾಗೂ ಅವರ ಧರ್ಮಪತ್ನಿ ಅವರದು ಕಾಯಕ ನಿಷ್ಠೆಯ ಜೀವನ ದಂಪತಿಗಳಿಬ್ಬರು ಬಸವಣ್ಣನ ಕಲ್ಯಾಣದಲ್ಲಿ ಮನೆ ಮನೆಗೆ ತೆರಳಿ ಸುಪ್ರಭಾತದ ಸಮಯದಲ್ಲಿ ತೆರಳಿ ಹೂವು,ಪತ್ರಿ, ಹೂಮಾಲೆಯನ್ನು ಕೊಡುವ ಕಾಯಕವನ್ನು ಮಾಡುತ್ತಿದ್ದರು ಇವರ ಕಾಯಕ ನಿಷ್ಠೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವಸೈನ್ಯದ ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ ಸುನೀಲ ಚಿಕ್ಕೋಂಡ ಬಸಣ್ಣ ಕಲ್ಲೂರ ಜಟ್ಟಿಂಗರಾಯ ಮಾಲಗಾರ ಸುರೇಶ ಹೂಗಾರ, ಪ್ರಶಾಂತ ಮುಂಜಾನೆ, ರವಿ ರಾಥೋಡ, ಲಾಲು ಕೊರಬು,ನೀಲಕಂಠ ಹೂಗಾರ, ಮಲ್ಲಿಕಾರ್ಜುನ ಜೀರ ಬಸವರಾಜ ಹೂಗಾರ, ಶಿದ್ದಪ್ಪ ಹೂಗಾರ, ಬಸವರಾಜ ಈರಪ್ಪ ಹೂಗಾರ ರಾಘವೇಂದ್ರ ಹೂಗಾರ ಆನಂದ ಜೀರ್.ಅಬ್ದುಲ ತಂಬದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು