ಜ್ಞಾನ ಪ್ರಕಾಶ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ
ಕೋಲಾರ,ಸೆ.೨೦- ಪ್ರಸಕ್ತ ಸಾಲಿನ ಕೋಲಾರ ಜಿಲ್ಲೆಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಛತ್ರಕೋಡಹಳ್ಳಿಯ ಜ್ಞಾನ ಪ್ರಕಾಶ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಫ್ರೌಢಶಾಲಾ ವಿಭಾಗದಲ್ಲಿ ಹ್ಯಾಂಡ್‌ಬಾಲ್‌ನಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮಸ್ಥಾನ ಅದೇ ರೀತಿ ಬಾಲಕರ ಖೋಖೋ ಪ್ರಥಮಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಹ್ಯಾಂಡ್‌ಬಾಲ್ ಪ್ರಥಮಸ್ಥಾನ ಗಳಿಸಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಬಾಲಕರ ವಿಭಾಗದಲ್ಲಿ ಹ್ಯಾಂಡ್ ಬಾಲ್ ಪ್ರಥಮಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಿರಿಯ ಪ್ರಾಥಮಿಕ ವಿಭಾಗದ ಅಥ್ಲೆಟಿಕ್ಸ್‌ನಲ್ಲಿ ಪೂರ್ವಿಕ್ ಕ್ರಮವಾಗಿ ೧೦೦ ಮೀ.ಓಟದಲ್ಲಿ ಪ್ರಥಮಸ್ಥಾನ, ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಬಾಲಕರ ವಿಭಾಗದ ೪*೧೦೦ ಮೀ ರಿಲೇಯಲ್ಲಿ ಯಶ್ವಂತ್, ಚಂದನ್, ಅಂಕಿತ್, ಪೂರ್ವಿಕ್ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಎತ್ತರ ಜಿಗಿತದಲ್ಲಿ ತೇಜಸ್ ದ್ವಿತೀಯಸ್ಥಾನ, ೬೦೦ ಮೀ ಓಟದಲ್ಲಿ ಚಂದನ್ ದ್ವಿತೀಯ ಸ್ಥಾನ ಗಳಿಸಿದ್ದು ಇವರೆಲ್ಲಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಪಟುಗಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ.