ಜಿಲ್ಲೆಯಲ್ಲಿ ಯಾವೂದೇ ಸಮಸ್ಯೆಗಳು ಬಗೆಹರಿಯುತ್ತಿಲ್ಲ
ಕೋಲಾರ,ಸೆ.೨೦- ಕೋಲಾರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಮಂತ್ರಿ ಬೈರತಿ ಸುರೇಶ್‌ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೋಲಾರ ಜಿಲ್ಲಾ ಶಾಖೆ ವತಿಯಿಂದ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕರಾದ ನಾಗನಾಳ ಮುನಿಯಪ್ಪ, ಜಿಲ್ಲಾಧಿಕಾರಿಗಳು ಕೋಲಾರಕ್ಕೆ ಬಂದಾಗಿನಿಂದ ಒಂದು ಕಡೆ ದಲಿತರನ್ನ ಸೇರಿಸಿ ನಮ್ಮ ಸಮಸ್ಯೆಗಳನ್ನ ಆಲಿಸಿಲ್ಲ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಹೋದಾಗ ಸರಿಯಾಗಿ ಸ್ಪಂದಿಸಿಲ್ಲ. ಈ ಕಾರಣಕ್ಕಾಗಿ ಯಾವುದೇ ಸಮಸ್ಯೆ ಬಗೆ ಹರೆದಿಲ್ಲ ಎಂದು ಉಸ್ತುವಾರಿ ಮಂತ್ರಿಗಳ ಗಮನಕ್ಕೆ ತಂದರು,
ಕೂಡಲೇ ಜಿಲ್ಲಾಧಿಕಾರಿಗಳನ್ನು ಕರೆಸಿ, ಎಲ್ಲಾ ದಲಿತ ಸಂಘಟನೆಗಳ ಸಭೆಯನ್ನ ಕರೆದು ಅವರ ಸಮಸ್ಯೆಗಳನ್ನು ಆಲಿಸಲು ಸೂಚನೆ ನೀಡಿದರು. ಈ ಕೂಡಲೇ ಒಂದು ಸಭೆಯನ್ನು ಏರ್ಪಡಿಸಿ ಇದುವರೆಗೂ ಸರ್ವೆ ನಂಬರ್‌ಗಳನ್ನ ಗುರುತಿಸಿ ಅದರಲ್ಲೂ ದಲಿತರ ಜಮೀನುಗಳ ಪೋಡಿಯನ್ನು ಬೇಗನೆ ಮಾಡಲು ಸೂಚಿಸಿದರು ಹಾಗೂ ಜಿಲ್ಲೆಯಾದ್ಯಂತ ಸರ್ಕಾರಿ ಗೋಮಾಳ ಎಷ್ಟಿದೆ ಎಂಬುದು ಸಾರ್ವಜನಿಕವಾಗಿ ಪ್ರಕಟಿಸಲು ಮತ್ತು ಶಾಸಕರ ನೇತೃತ್ವದಲ್ಲಿ ದರಕಾಸ್ತು ಸಮಿತಿಗಳ ಮುಖಾಂತರ ಜಮೀನು ಮಂಜೂರಾತಿ ಮಾಡಲು ನಿಗಾ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸಂಘಟ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ಜಿಲ್ಲೆಯ ವಸತಿ ನಿಲಯಗಳಲ್ಲಿ ಇತ್ತೀಚಿಗೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿದ್ದು, ರಾತ್ರಿ ಪಾಳಿಯಲ್ಲಿ ವಸತಿ ನಿಲಯಗಳ ಮೇಲೆ ಪೋಲಿಸ್ ಇಲಾಖೆ ನಿಗಾಹಿಸಲು ಹೆಣ್ಣು ಮಕ್ಕಳ ನಿಲಯಗಳಿಗೆ ಹೆಣ್ಣು ಮಕ್ಕಳನ್ನೇ ವಾರ್ಡನ್ ನೇಮಿಸಲು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾಸ್ತಿ ಹೋಬಳಿ ಭೂವಿಚಾರ ಮುಂತಾದ ವಿಚಾರಗಳನ್ನ ಸಚಿವರ ಗಮನಕ್ಕೆ ತರಲಾಯಿತು.
ಜಿಲ್ಲಾ ಸಂಘಟನಾ ಸಂಚಾಲಕರಾದ ಸಭೆಯಲ್ಲಿ ಚವ್ವೇನಹಳ್ಳಿ ವಿಜಿ, ಜಿಲ್ಲಾ ಸಂಘಟವಾ ಸಂಚಾಲಕರಾದ ಮುದುವತ್ತಿ ಕೇಶವ ,ಮಾಲೂರು ತಾಲೂಕ ಸಂಚಾಲಕ ಎಸ್ ವೆಂಕಟೇಶ್, ಬಂಗಾರಪೇಟೆ ತಾಲೂಕು ಸಂಚಾಲಕ ದೇಶಹಳ್ಳಿ ಶ್ರೀನಿವಾಸ್, ದೊಡ್ಡ ಕಲ್ಲಳ್ಳಿ ನಾರಾಯಣಸ್ವಾಮಿ, ಗೋಪಿ , ತಿರುಮಲೇಶ, ರಾಜು, ಶಾಮ್, ಭಂಡಟ್ಟಿ ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.