ಶೇ. 85 ರಷ್ಟು ಫಲಿತಾಂಶ
ಗುಳೇದಗುಡ್ಡ,ಏ11 : ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶೇ. 85ರಷ್ಟಾಗಿದೆ. ಕಲಾ ವಿಭಾಗದಲ್ಲಿ 67, ವಾಣಿಜ್ಯ ವಿಭಾಗ 50 ಮತ್ತು ವಿಜ್ಞಾನ ವಿಭಾಗದಲ್ಲಿ 51 ಒಟ್ಟು 168 ವಿದ್ಯಾರ್ಥಿಗಳು ಹಾಜರಾಗಿದ್ದರು. ವಿಜ್ಞಾನ ವಿಭಾಗದಲ್ಲಿ ಸ್ನೇಹಾ ರಾಹುತರ, ಶೇ.94 (563 ಅಂಕ) ಪ್ರಥಮ, ಗೌರಮ್ಮ ನರಗುಂದ ಶೇ. 88 (529 ಅಂಕ ) ದ್ವಿತೀಯ, ಚಂದನಾ ಶ್ಯಾವಿ ಶೇ. 86 ತೃತಿಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸ್ಫೂರ್ತಿ ಬಡಿಗೇರ ಶೇ. 92 (550) ಪ್ರಥಮ, ದೀಪಾ ದೊಡಕುಂಡಿ ಶೇ.88 (528) ದ್ವಿತೀಯ, ಕುಮಾರಿ ಹಿಂದಿನಮನಿ ಶೇ.86 (515) ತೃತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದ ಲಲಿತಾ ರಾಠೋಡ ಶೇ.92 (550) ಪ್ರಥಮ, ಭಾಗ್ಯಶ್ರೀ ರಾಂಪೂರ ಶೇ.88 (528) ದ್ವಿತೀಯ ರಾಹುಲ್ ಚೌವ್ಹಾಣ ಶೇ. 87 (519) ತೃತೀಯ ಸ್ಥಾನ ಪಡೆದಿದ್ದಾರೆಂದು ಕಾಲೇಜಿನ ಪ್ರಾಚಾರ್ಯ ಅರ್ಚನಾ ದೊಡಮನಿ ತಿಳಿಸಿದ್ದಾರೆ.