ರೇಖಾ ಉತ್ತಮ ಸಾಧನೆ
ಗುಳೇದಗುಡ್ಡ,ಏ11: ತಾಲೂಕಿನ ಲಕ್ಕಸಕೊಪ್ಪ ಗ್ರಾಮದ ವಿದ್ಯಾರ್ಥಿನಿ ರೇಖಾ ಗುರುಬಸಯ್ಯ ಹಿರೇಮಠ ಅವರು ಪಿಯುಸಿ ಕಲಾವಿಭಾಗದಲ್ಲಿ 600ಕ್ಕೆ 577 (ಶೇ.96) ಅಂಕಗಳನ್ನು ಪಡೆದು ಸಾಧನೆ ಗೈದಿದ್ದಾರೆ. ವಿದ್ಯಾರ್ಥಿನಿ ಬಾಗಲಕೋಟೆಯ ಬಸವೇಶ್ವರ ಪಿಯು ಕಾಲೇಜಿನಲ್ಲಿ ಓದುತ್ತಿದ್ದಳು. ಕನ್ನಡ ವಿಷಯಕ್ಕೆ 98, ಇಂಗ್ಲಿಷ್ 83, ಇತಿಹಾಸ 100, ಅರ್ಥಶಾಸ್ತ್ರ 99, ಸಮಾಜಶಾಸ್ತ್ರ 97, ಶಿಕ್ಷಣಶಾಸ್ತ್ರ 100 ಅಂಕಪಡೆದಿದ್ದಾಳೆ.