ಮಾರ್ಟಳ್ಳಿ ಸೆಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ 100% ಘಲಿತಾಂಶ
ಸಂಜೆವಾಣಿ ವಾರ್ತೆ
ಹನೂರು ಏ 11 :- ತಾಲೂಕಿನ ಮಾರ್ಟಳ್ಳಿ ಸೆಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ಪಡೆದು ಕಲಾ ವಿಭಾಗದಲ್ಲಿ 88% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗ ಗಿನಿತ್ 559 ಅಂಕಗಳು, ಕಲಾ ವಿಭಾಗ ಜೋಯ್ಸ್ ಮೇರಿ 513 ಅಂಕಗಳು ,ವಾಣಿಜ್ಯ ವಿಭಾಗದ ಲ್ಯಾನ್ಸಿ ಎಂಬ ವಿದ್ಯಾರ್ಥಿ 562 ಅಂಕಗಳನ್ನು ಪಡೆದು ಕಾಲೇಜಿಗೆ ಟಾಪರ್ ಆಗಿದ್ದಾಳೆ.
ಒಟ್ಟಾರೆ ಈ ಬಾರಿ, ಶೇ 95.50% ಮಂದಿ ಉತ್ತೀರ್ಣರಾಗಿದ್ದಾರೆ.
ಕಾಲೇಜಿಗೆ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿಗಳನ್ನು ಕಾಲೇಜಿನ ವ್ಯವಸ್ಥಾಪಕರಾದ ಫಾ ಟೆನ್ನಿ ಕುರಿಯನ್ ಪ್ರಾಂಶುಪಾಲರಾದ ಫಾ ಕ್ರಿಸ್ಟೇಫರ್ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.