ಕಾನೂನು ಹೋರಾಟದ ಫಲ ಮಂಜೂರುದಾರರ ವಶಕ್ಕೆ ಭೂಮಿ
ದೇವನಹಳ್ಳಿ ಏ೧೧.ಸರ್ಕಾರದಿಂದ ಮೂಂಜುರಾಗಿದ್ದ ಭೂಮಿಯನ್ನ ಅಕ್ರಮ ಕಾನೂನು ಬಾಹಿರವಾಗಿ ಕಬಳಿದ್ದ ಭೂ ಮಾಫಿಯಾ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಅಣಿಘಟ್ಟ ಗ್ರಾಮದ ಸರ್ವೆನಂಬರ್೪೪ರಲ್ಲಿ ೧ಎಕರೆ ೦೮ ಭೂಮಿಯನ್ನು ಕಬಳಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಉಪವಿಭಾಗಧಿಕಾರಿಗಳ ಕಛೇರಿಯಲ್ಲಿ ಕೇಸ್ ದಾಖಲು ಮಾಡಿ ಕಾನೂನಿನ ಹೋರಟಮಾಡಿ ಗೆಲುವು ಸಾಧಿಸಿದ ಮೂಲ ಮಂಜೂರುದಾರ ನರಸಿಂಹಯ್ಯ ನಿಗೆ, ಅಧಿಕಾರಿಗಳು ಭೂಮಿ ಬಿಡಿಸಿ ಕೊಟ್ಟಿರುವ ಘಟನೆ ನಡೆಯಿತು.
ಇದೇ ವೇಳೆ ಮಾತನಾಡಿದ ಪಿಟಿಸಿಎಲ್ ಕಾಯ್ದೆ ಭೂ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ ರಾಜ್ಯದೆಲ್ಲೇಡೆ ಬಲಾಡ್ಯರು ದಲಿತರಿಗೆ ಅಸ್ಪೃಶ್ಯರಿಗೆ ಮೋಸ ಮಾಡಿ ಕಾನೂನು ಬಾಹಿರವಾಗಿ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ, ಭೂ ಕಬಳಿಕೆ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತೆಲೆ ಬಂದಿದ್ದೀವಿ.ಕಿ
೨೦೮ದಿನಗಳ ಕಾಲ ಫ್ರೀಡiಕಿ ಪಾರ್ಕಿನಲ್ಲಿ ನಿರಂತರ ಹೋರಾಟ ಮಾಡಿದೆವು, ಬಿಜೆಪಿ ಸರ್ಕಾರ ನಮಗೆ ಸ್ವಂದಿಸದೇ ಮೋಸ ಮಾಡಿದೆ ಈಗಿನ ಸರ್ಕಾರ ನಮ್ಮ ಬೇಡಿಕೆಯನ್ನು ಪುರಸ್ಕರಿಸಿದೆ ನಮ್ಮ ನೆರವಿಗೆ ಬಂದು ಪಿಟಿಸಿಎಲ್ ಕಾಯ್ದೆಗೆ ಕಾಲಮಿತಿ ಇಲ್ಲ ಎಂದು ಅಮೆಂಡ್ಮೆಂಟ್ ಮಾಡಿ ಆದೇಶ ನೀಡಿದ ಫಲವಾಗಿ ಇಂದು ಮೂಲ ಮಂಜೂರುದಾರ ನರಸಿಂಹಯ್ಯ ನಿಗೆ ಜಮೀನು ಉಳಿಸಲು ಸಾಧ್ಯವಾಗಿದೆ ಎಂದರು
ಇದೆ ವೇಳೆ ಪಿವಿಸಿಎಸ್ ರಾಜ್ಯಾಧ್ಯಕ್ಷ ಮುನಿ ಆಂಜಿನಪ್ಪ, ಈಶ್ವರ ಮೂರ್ತಿ,ಹರಿರಾಮ್,ಬೀಮ್ ರಾವ್ ಕೃಷ್ಣಸ್ವಾಮಿ ಸುರೇಶ್, ದಾಸರಬಿದಿ ಮುರಳಿ,ನಾಗವೇಣಿ, ಚನ್ನಕೇಶವ
ಹಾಗೂ ವಿಶ್ವನಾಥ ಪುರ ಪೋಲೀಸ್ ಸಿಬ್ಬಂದಿ ವರ್ಗ, ಕಂದಾಯ ಅಧಿಕಾರಿಗಳು ಅನೇಕ ದಲಿತ ಪರ ಸಂಘಟನೆಗಳು ಇದ್ದರು.