ಮಾದಪ್ಪನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಮಹಿಳೆ: ಆನೆ ದಾಳಿಗೆ ಬಲಿ
ಸಂಜೆವಾಣಿ ವಾರ್ತೆ
ಹನೂರು ಏ 11 :- ಶ್ರೀ ಮಲೆ ಮಾದಪ್ಪನ ದರ್ಶನಕ್ಕೆ ದಟ್ಟ ಕಾಡಿನ ಮಾರ್ಗವಾಗಿ ಕಾಲ್ನಾಡಿಗೆಯಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬಳು ಆನೆ ದಾಳಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಯುಗಾದಿ ಹಬ್ಬದ ದಿನದಂದೇ ಜರುಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ಕಿರುಗಾವಲು ಹೊನ್ನೇನಹಳ್ಳಿ ಗ್ರಾಮದ ಲಕ್ಷ್ಮಿ (40) ಎಂಬ ಮಹಿಳೆ ಆನೆ ದಾಳಿಗೆ ಮೃತಪಟ್ಟ ದುರ್ದೈವಿ. ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಡಿನ ಮಾರ್ಗವಾಗಿ ಮಂಗಳವಾರ ರಾತ್ರಿ ಸುಮಾರು ಏಳು ಗಂಟೆಯ ಸಮಯದಲ್ಲಿ ಸುಮಾರು ಎಂಟು ಜನ ಭಕ್ತರು ಬಂದಿದ್ದದಾರೆ. ಇದರರಲ್ಲಿ ಲಕ್ಷ್ಮಿ, ಪದ್ಮಮ್ಮ, ಪುಟ್ಟರಾಜು ತಾಳುಬೆಟ್ಟದಿಂದ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು.
ತಾಳುಬೆಟ್ಟ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಸಾಗಿದ ಭಕ್ತರು ರಂಗಸ್ವಾಮಿ ಒಡ್ಡಿನಿಂದ ಆನೆ ತಲೆ ದಿಂಬು ಸಂಪರ್ಕ ಕಲ್ಪಿಸುವ ಅರಣ್ಯ ಪ್ರದೇಶದ ಕಾಲ್ನಡಿಗೆ ದಾರಿಯಲ್ಲಿ ಹಠಾತ್ತನೆ ಕಾಡಾನೆ ದಾಳಿ ಮಾಡಿದೆ. ಈವೇಳೆ ಭಕ್ತಾದಿಗಳು ತಪ್ಪಿಸಿಕೊಂಡು ಓಡಿದ್ದಾರೆ ಅದರಲ್ಲಿ ಲಕ್ಷ್ಮಿ ಎಂಬ ಮಹಿಳೆ ಆನೆ ದಾಳಿಯ ತುಳಿತಕ್ಕೆ ಸಿಕ್ಕಿ ಬಿದ್ದು ಮೃತಪಟ್ಟಿದ್ದಾರೆ.
ವಿಷಯ ತಿಳಿದಿದ್ದಂತೆ ಘಟನೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲೆ ಮಾದೇಶ್ವರ ಬೆಟ್ಟ ಪೆÇಲೀಸ್ ಠಾಣೆಯಲ್ಲಿ ಘಟನೆ ಸಂಭಂದ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.