ಕ್ರೋಧಿನಾಮ ಸಂವತ್ಸರ ಯುಗಾದಿ ವಿಶೇಷಪಾರಾಯಣ
ಕಲಬುರಗಿ,ಏ 10: ಜಯತೀರ್ಥ ನಗರದ ಶ್ರೀಲಕ್ಷ್ಮೀನಾಯಣ ಮಂದಿರದಲ್ಲಿ ಯುಗಾದಿ ಕ್ರೋಧಿ ನಾಮ ಸಂವತ್ಸರದ ನಿಮಿತ್ತ ವಿಷ್ಣುಸಹಸ್ರನಾಮ ಪಾರಾಯಣ ನಂತರ ಅಂತರಾಷ್ಟ್ರೀಯ ವಕೀಲರ ದಿನಾಚರಣೆ ಅಂಗವಾಗಿ ಪಾರಾಯಣ ಸದಸ್ಯರು ವಕೀಲರಾದ ವಿಶ್ವನಾಥ ಕುಲಕರ್ಣಿ, ಗುರುರಾಜ ದೇಶಪಾಂಡೆ,ರಮೇಶ ಕುಲಕರ್ಣಿ ಅವರನ್ನು ಸನ್ಮಾನಿಸಿದರು.
ಹಾಗೂ ಶ್ರೀ ಸತ್ಯಸಂತುಷ್ಟತೀರ್ಥರ ಉತ್ತರಾಧನೆ ಮತ್ತು ಶ್ರೀ ಸತ್ಯಪ್ರಜ್ಞತೀರ್ಥರು ಆತಕೂರ ಅವರ ಆರಾಧನಾ ನಿಮಿತ್ತ ಅವರ ಚರಮಶ್ಲೋಕ ಪಠಿಸಲಾಯಿತು.ಪಾರಾಯಣ ಸಂಚಾಲಕ ರವಿ ಲಾತೂರಕರ, ಡಾ.ಕೃಷ್ಣ ಕಾಕಲವಾರ,ರಾಮಾಚಾರ್ಯ ನಗನೂರ,ಜಗನ್ನಾಥ ಸಗರ, ಸತ್ಯಭೋಧ ಕಾಗಲಕರ, ಶೇಷಗಿರಿ ಹುಣಸಗಿ,ಅಪ್ಪರಾವ ಟಕ್ಕಳಕಿ, ಸುರೇಶ ಕುಲಕರ್ಣಿ,ಅನೀಲ ಕುಲಕರ್ಣಿ,ರಂಗರಾವ್,ಸುಬ್ಬರಾವ ಕುಲಕರ್ಣಿ, ವೆಂಕಟರಾವ್, ಸಮಿರ ,ಅನಿರುದ್ಧ,ಸಂಕರ್ಷಣ,ಗುಂಡೇರಾವ,ಪ್ರವೀಣ ಓಂಕಾರ ಉಪಸ್ಥಿತರಿದ್ದರು.