ಆಯುಧ ಲೈಸೆನ್ಸ್ ದಾರರಿಗೆ ವಿನಾಯಿತಿ ನೀಡಿ ಡಿ.ಸಿ. ಆದೇಶ
ಕಲಬುರಗಿ:ಏ.10:ಲೋಕಸಭೆ ಸಾರ್ವತ್ರಿಕ ಚುನಾವಣೆ-2024 ಹಿನ್ನೆಲೆಯಲ್ಲಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಕ್ರಿನಿಂಗ್ ಕಮಿಟಿ ಸಭೆ ನಡೆಸಿ 4 ಜನರಿಗೆ ಆತ್ಮ ರಕ್ಷಣೆಗಾಗಿ, 1 ಕ್ರೀಡಾ ತರಬೇತಿ ಸಲುವಾಗಿ ಹಾಗೂ ಬಿರ್ಲಾ ಶಕ್ತಿ ಸಿಮೆಂಟ್‍ನ ಸೆಕ್ಯೂರಿಟಿ ಏಜೆನ್ಸಿಯ 2 (ಗಾರ್ಡ್‍ಗಳಿಗೆ) ಆಯುಧ ಲೈಸೆನ್ಸ್‍ದಾರರಿಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಆಯುಧಗಳನ್ನು ಠೇವಣಿ ಮಾಡುವುದರಿಂದ ವಿನಾಯಿತಿ ನೀಡಿ ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಆತ್ಮ ರಕ್ಷಣೆಗಾಗಿ ಪಡೆದ, ಸೆಕ್ಯೂರಿಟಿ ಏಜೆನ್ಸಿ ಗಾರ್ಡ್, ಕ್ರೀಡಾಪಟು ತರಬೇತಿ ಸಲುವಾಗಿ ಪಡೆದ ಆಯುಧಗಳನ್ನು ಸಂಬಂಧಪಟ್ಟ ಠಾಣೆಗಳಲ್ಲಿ ಜಮಾ ಹಾಗೂ ಠೇವಣಿ ಮಾಡಲು ವಿನಾಯಿತಿ ನೀಡುವಂತೆ ವ್ಯಕ್ತಿ/ ಸಂಸ್ಥೆಗಳು ಮನವಿ ಅರ್ಜಿ ಸಲ್ಲಿಸಿದರು. ಇದನ್ನು ಸ್ಕ್ರಿನಿಂಗ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಆಯುಧಗಳನ್ನು ಠೇವಣಿ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ.
ವಿನಾಯಿತಿ ನೀಡಿದ ವ್ಯಕ್ತಿ/ಸಂಸ್ಥೆ ಹೆಸರು ಹಾಗೂ ಆಯುಧ ಲೈಸೆನ್ಸ್ ನಂಬರ್ ವಿವರ ಇಂತಿದೆ. ಕಮಲಾಪೂರ ತಾಲೂಕಿನ ನಾಗೂರ ಶಿವಶರಣಪ್ಪ ತಂ. ಮಲ್ಲಿಕಾರ್ಜುನಪ್ಪಾ ಮುಗಳಿ (ಆಯುಧ ಲೈಸೆನ್ಸ್ ನಂ. ಜಿಬಿಎ/20/2006), ಶಹಾಬಾದ ನಂ. 1 ಅಪ್ಪರಮಡ್ಡಿಯ ಅವಿನಾಶ ತಂದೆ ಬೈಲಪ್ಪಾ ಕಂಬಾನೂರ (ಆಯುಧ ಲೈಸೆನ್ಸ್ ನಂ. ಚಿತ್ತಾಪುರ/2/2021), ಶಹಾಬಾದ ನಂ. 1 ಅಪ್ಪರಮಡ್ಡಿಯ ಅಭಿಷೇಕ ತಂ. ಅಶೋಕ ದೊಡ್ಡಮನಿ (ಆಯುಧ ಲೈಸೆನ್ಸ್ ನಂ. ಚಿತ್ತಾಪುರ/3/2022), ಆಳಂದ ತಾಲೂಕಿನ ಭೂಸನೂರ ಲಕ್ಷ್ಮಣ ತಂ. ಹಣಮಂತ ಬಿಳಗೆ (ಆಯುಧ ಲೈಸೆನ್ಸ್ ನಂ. ಆಳಂದ/02/2019), ಸೇಡಂ ತಾಲೂಕಿನ ಹಯ್ಯಾಳ ಕು. ಸಾಕ್ಷೀ ರೆಡ್ಡಿ ತಂ. ಶ್ರೀನಿವಾಸ್ ರೆಡ್ಡಿ (ಆಯುಧ ಲೈಸೆನ್ಸ್ ನಂ. ಸೇಡಂ/01/2023) ಹಾಗೂ ಫ್ಯಾಕ್ಟರಿ ಮ್ಯಾನೇಜರ್ (ಬಿರ್ಲಾ ಶಕ್ತಿ ಸಿಮೆಂಟ್) (ಆಯುಧ ಲೈಸೆನ್ಸ್ ನಂ. ಜಿಬಿಎ/1301/1/91) ಹಾಗೂ ಫ್ಯಾಕ್ಟರಿ ಮ್ಯಾನೇಜರ್ ಬಿರ್ಲಾ ಶಕ್ತಿ ಸಿಮೆಂಟ್ (ಆಯುಧ ಲೈಸೆನ್ಸ್ ನಂ. ಜಿಬಿಎ/1302/2/91).