ನರ್ಸ್ ವೃತ್ತಿಯ ಪಾವಿತ್ರ್ಯವನ್ನು ಹೆಚ್ಚಿಸಿ: ಬಸವರಾಜ ಕೌಲಗಿ
ವಿಜಯಪುರ, ಏ.10 :ಅತ್ಯಂತ ಪವಿತ್ರವಾದ ವೃತ್ತಿಯಾಗಿರುವ ನರ್ಸ್ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಆ ವೃತ್ತಿಯ ಘನತೆ ಗೌರವವನ್ನು ಹೆಚ್ಚಿಸಬೇಕು. ಆ ಮೂಲಕ ರೋಗಿಗಳ ಮುಖದಲ್ಲಿ ನಗು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಎಕ್ಸಲೆಂಟ್ ಕಾಲೇಜ್ ಆಫ್ ನಸಿರ್ಂಗ್ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು. ನಗರದಲ್ಲಿ ನಡೆದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲೆಂಟ್ ಕಾಲೇಜ್ ಆಫ್ ನಸಿರ್ಂಗ್ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ದೀಪದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಂದಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕುಮಾರ ದೇಸಾಯಿ ಅವರು ಮಾತನಾಡಿ, ಈ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ನಿಮ್ಮ ಉತ್ತಮ ಸಾಧನೆ ಹಾಗೂ ತಾವೆಲ್ಲರೂ ಪಡೆದಿರುವ ಬಹುಮಾನಗಳನ್ನು ನೋಡಿದರೆ ನನಗೆ ಸಂತೋಷವೆನಿಸುತ್ತದೆ, ನಸಿರ್ಂಗ್ ಕೋರ್ಸ್ ಮುಗಿದ ನಂತರ ನೀವು ಪ್ರಾಮಾಣಿಕ ದಾದಿಯರಾಗಿ ಜನರ ಆರೋಗ್ಯವನ್ನು ರಕ್ಷಿಸಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಎನ್. ಎಂ. ಬಿರಾದಾರ ಮಾತನಾಡಿ, ನಸಿರ್ಂಗ್ ಶಿಕ್ಷಣ ಮತ್ತು ನಸಿರ್ಂಗ್ ವೃತ್ತಿಯ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ನೈಟಿಂಗ್ ಹೇಲ್ಸ್ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದು, ನೀವು ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವಿರೋ ಆ ವೃತ್ತಿಯನ್ನು ಪ್ರೀತಿಸಿ, ಪ್ರೀತಿಯಿಂದ ಸೇವೆ ಮಾಡಿದರೆ ಅದಕ್ಕಿಂತ ಸಾರ್ಥಕವಾದ ಕೆಲಸ ಜೀವನದಲ್ಲಿ ಮತ್ತೊಂದಿರಲಾರದು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ನೀವು ನಿಮ್ಮ ವೃತ್ತಿಯಲ್ಲಿ ನೈಪುಣ್ಯತೆಯನ್ನು ಗಳಿಸಿಕೊಂಡು, ರೋಗಿಗಳ ಸೇವೆಯೇ ಭಗವಂತನ ಸೇವೆ ಎಂದು ಪ್ರಾಮಾಣಿಕವಾಗಿ ದುಡಿದರೆ, ರೋಗಿಗಳ ಹೃದಯದಲ್ಲಿ ದೇವರ ಸ್ಥಾನವನ್ನು ಪಡೆಯುತ್ತೀರಿ. ನಮ್ಮ ಭಾರತ ದೇಶದ ಸಂಸ್ಕೃತಿ ನಿಂತಿರುವುದೇ ಪ್ರೀತಿ ಮತ್ತು ತ್ಯಾಗ ಎನ್ನುವ ಮೌಲ್ಯಗಳ ಮೇಲೆ ಎನ್ನುವುದನ್ನು ತಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಸಂಸ್ಥೆಯ ಕಾರ್ಯದರ್ಶಿ ಪ್ರದೀಪ ಲಿಂಗದಳ್ಳಿ, ಪ್ರಾಚಾರ್ಯೆ ಶ್ವೇತಾ ಬಿರಾದಾರ. ಪೆÇ್ರ. ಕಲ್ಯಾಣಿ, ಅಖಿಲಾ ಬಿರಾದಾರ, ಅಂಜುಮ್ ಹತ್ತರಕಿಹಾಳ, ಆಕಾಶ ಮಳನೂರ, ರಾಜು ತಿಡಗುಂದಿ ಹಾಗೂ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯೆ ಶ್ವೇತಾ ಬಿರಾದಾರ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಸವರಾಜ ಬಾಗೇವಾಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.