ಮತದಾನ ಹೆಚ್ಚಳದಲ್ಲಿ ಎಲ್ಲರ ಸಹಭಾಗಿತ್ವ ಅತ್ಯಗತ್ಯ : ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಭಾಲ್ಕಿ: ಏ.10: ಮತದಾನ ಹೆಚ್ಚಳದಲ್ಲಿ ಸರ್ಕಾರಿ ನೌಕರರು ಸೇರಿದಂತೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಪಟ್ಟಣ ಡಿವಾಯ್‍ಎಸ್‍ಪಿ ಪೆರೇಡ್ ಗ್ರೌಂಡ್‍ನಲ್ಲಿ, ಲೋಕ ಸಭೆ ಚುನಾವಣೆ ನಿಮಿತ್ಯ, ಜಿಲ್ಲಾಡಳಿತ, ತಾಲೂಕು ಆಡಳಿತ, ಸ್ವೀಪ್ ಸಮಿತಿ, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಬುಧವಾರ ನಡೆದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮತನಾಡಿದರು.
ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ. ಎಲ್ಲರೂ ಜಾಗೃತವಾಗಿ, ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜ್ಞಾವಂತರು ಮತ ಪ್ರಮಾಣ ಹೆಚ್ಚಳಕ್ಕಾಗಿ ಕೈಜೊಡಿಸಬೇಕು. ಎಲ್ಲರೂ ಮತ ಚಲಾಯಿಸಿ ರಾಷ್ಟ್ರವನ್ನ ಮುನ್ನಡೆಸೋಣ ಎನ್ನುವ ಧೇಯದೊಂದಿಗೆ ಸ್ವೀಪ್ ಸಮಿತಿಯ ಕಾರ್ಯ ಚಟುವಟಿಕೆಗಳ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ನೌಕರರಲ್ಲದೇ ಸಾರ್ವಜನಿಕರೂ ಕೈಜೋಡಿಸಿದಲ್ಲಿ ನಮ್ಮ ಜಿಲ್ಲೆಯಲ್ಲಿ ಪ್ರತಿಶತ 80% ಕ್ಕಿಂತ ಹೆಚ್ಚು ಮತದಾನ ಮಾಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿಯ ಗೌತಮ ಅರಳಿ ಮಾತನಾಡಿ, ಮತದಾನ ದಿನದವರೆಗೆ ಪ್ರತಿ ಗ್ರಾಮ ತಲುಪಿ ಪತ ಹೆಚ್ಚಳಕ್ಕೆ ಶ್ರಮಿಸಲಾಗುವುದು. ಭಾಲ್ಕಿ ಕ್ಷೇತ್ರದ 15 ಮತಗಟ್ಟೆಗಳಲ್ಲಿ ಕಳೆದ ಸಂಸತ್ ಚುನಾವಣೆಯಲ್ಲಿ ಕಡಿಮೆ ಮತದಾನ ಕಂಡುಬಂದಿದೆ. ಈ ಮತಗಟ್ಟೆಗಳಲ್ಲಿ ಅತಿ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಎಸ್.ಪಿ ಚನ್ನಬಸವಣ್ಣ.ಎಲ್ ಮಾತನಾಡಿ, ಜಿಲ್ಲಾದ್ಯಂತ ಮತ ಪ್ರಮಾಣ ಹೆಚ್ಚಿಸುವಲ್ಲಿ ಶ್ರಮವಹಿಸಲಾಗುದು. ಕಳೆದ ಸಂಸತ ಚುವಾಣೆಯಲ್ಲಿ ಬೀದರ ಕ್ಷೇತ್ರದಲ್ಲಿ ಅತಿ ಕಡಿಮೆ ಪತದಾನವಾಗಿದ್ದು ಕಂಡು ಬಂದಿದೆ. ಈ ಸಲದ ಚುನಾವಣೆಯಲ್ಲಿ, ಪ್ರತಿಯೊಂದು ಮತಗಟ್ಟೆಗಳಲ್ಲಿಯೂ ಪ್ರತಿಶತ 80%ಕ್ಕಿಂತ ಹೆಚ್ಚು ಮತ ಪ್ರಮಾಣ ಆಗುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಗಿರೀಶ ದಿಲೀಪ್ ಬಡೋಲೆ ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಮಾಡಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು.
ಪ್ರಾರಂಭದಲ್ಲಿ ಸರ್ಕಾರಿ ಪ್ರೌಢಶಾಲೆ ಯಿಂದ ಡಿವಾಯ್‍ಎಸ್‍ಪಿ ಪೆರೆಡ್ ಗ್ರೌಂಡ್ ವರೆಗೆ, ಜಿಲ್ಲಾಧಿಕಾರಿ ಮತ್ತು ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ನೌಕರರು ಪಟ್ಟಣದ ವಿವಿಧ ಬೀದಿಗಳಲ್ಲಿ ವಾಕ್‍ಥಾನ್ ನಡೆಸಿ ಮತದಾರರಿಗೆ ಜಾಗೃತಿ ಮೂಡಿಸಿದರು. ನಂತರ ಡಿವಾಯ್‍ಎಸ್‍ಪಿ ಪೆರೆಡ್ ಗ್ರೌಂಡ್‍ನಲ್ಲಿ ಸರ್ಕಾರಿ ನೌಕರರು ಕ್ರಿಕೆಟ್, ಕಬ್ಬಡ್ಡಿ, ವಾಲಿಬಾಲ್, ಹೆಣ್ಣುಮಕ್ಕಳ ಚೆರ್, ಹಗ್ಗದಾಟಗಳನ್ನು ಆಡುವ ಮೂಲಕ ಸ್ವೀಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಡಿವಾಯ್‍ಎಸ್‍ಪಿ ಶಿವಾನಂದ ಪವಾಡಶೆಟ್ಟಿ, ತಹಸೀಲ್ದಾರ ಶ್ರೀಯಾಂಕಾ ಧನಾಶ್ರೀ, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೆಪ್ಪ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಅಶೋಕಕುಮಾರ ಬಿರಾದಾರ, ಕಂದಾಯ ನೌಕರರ ಸಂಘದ ಗೋಪಾಲ ಹಿಪ್ಪರಗಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತಾತ್ರಿ ಕಾಟಕರ, ಸಿಪಿಐ ಅಮರೇಶ ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳ ಸಾವಿರಾರು ನೌಕರರು ಇದ್ದರು. ದೈಹಿಕ ಶಿಕ್ಷಕ ಹಣಮಂತ ಕಾರಾಮುಂಗೆ ನಿರೂಪಿಸಿದರು.