ಚಳಕಾಪೂರ: ಬೇಸಿಗೆ ತರಬೇತಿ ಶಿಬಿರದಲ್ಲಿ ಸಂಗೀತ ಸುಧೆ
ಭಾಲ್ಕಿ:ಏ.10: ತಾಲೂಕಿನ ಚಳಕಾಪೂರ ಗ್ರಾಮದ ಬಸವ ಸಂದೇಶ ಶಾಲೆಯಲ್ಲಿ ನಡೆಯುತ್ತಲಿರುವ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಬೇಸಿಗೆ ತರಬೇತಿ ಶಿಬಿರದಲ್ಲಿ ಸಂಗೀತ ಕಲಾವಿದರು ಮತ್ತು ಶಿಕ್ಷಕರಿಂದ ಸಂಗೀತ ಸುಧೆ ಉಣಬಡಿಸಲಾಯಿತು.
ಹುಮನಾಬಾದ ತಾಲೂಕಿನ ಘಾಟಬೋರಾಳ ಗ್ರಾಮದ ಪ್ರಕಾಶ ವಿದ್ಯಾಲಯದಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಸಂಗೀತ ಶಿಕ್ಷಕ ದಿಗಂಬರ ಹೊನ್ನಾಳೆಯವರು ವಿವಿಧ ರೀತಿಯ ಸಂಗೀತ ನುಡಿಸುವ ಮೂಲಕ ಶಿಬಿರಾರ್ಥಿಗಳಿಗೆ ಮುದ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಸ್.ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಹಣಮಂತರಾವ ಹುಲೆಪ್ಪನೋರ, ಬೇಸಿಗೆ ಬಿಸಿಲಿನಲ್ಲಿ ಸುಮ್ಮನೆ ಕಾಲ ಕಳೆದು ಆರೋಗ್ಯ ಹಾಳು ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ವಿದ್ಯಯೊಂದಿಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಆಟಪಾಠಗಳನ್ನು ಹೇಳಿಕೊಡುತ್ತಿರುವುದು ವಿದ್ಯಾರ್ಥಿಗಳಲ್ಲಿಯ ಚೇತನಾ ಶಕ್ತಿ ಬಡಿದೆಬ್ಬಿಸಲು ಸಹಕಾರಿಯಾಗಿದೆ. ಬಸವ ಸಂದೇಶ ಶಾಲೆಯಲ್ಲಿ 1 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ತಮ್ಮ ಪಾಠದೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಓದುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳುತ್ತಿರುವುದು ಕಂಡು ಬಂದಿದೆ ಎಂದು ಹೇಳಿದರು.
ಬೇಸಿಗೆ ಶಿಬಿರದ ಸಂಚಾಲಕ ನಾಗರಾಜ ಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಭಿಷೇಕ್ ಹೊನ್ನಾಳೆ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಿಖಿಲ ಹುಲೆಪನೋರ, ಚಾಮುಂಡಿ ಮಾಸುಲ್ದಾರ, ಚಂದ್ರಕಾಂತ ಒಲ್ದೊಡ್ಡಿ, ಅಶ್ವಿನಿ ಲಕ್ಕಾ, ನಾಗೇಶ್ವರಿ ಬೇಳಕೋಟೆ, ಕಲ್ಪನಾ ಮಾಲಕರ ಉಪಸ್ಥಿತರಿದ್ದರು.