ಇಪ್ತಿಯಾರ ಕೂಟ ಸಾಮರಸ್ಯವನ್ನು ಬೆಳೆಸುತ್ತದೆ:ಅಸ್ಕಿ
ತಾಳಿಕೋಟೆ:ಏ.10: ರಂಜಾನ ಹಬ್ಬದ ಸಂದರ್ಬದಲ್ಲಿ ಮುಸ್ಲಿಂ ಸಮಾಜ ಬಾಂದವರು ಉಪವಾಸ ವೃತ ಕೈಗೊಳ್ಳುವದರೊಂದಿಗೆ ಸಾಮರಸ್ಯ ಬೆಳೆಸುವದಕ್ಕಾಗಿ ದೇವನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಇಂತಹ ಸಂದರ್ಬದಲ್ಲಿ ಇಪ್ತಿಯಾರ ಕೂಟ ಆಯೋಜನೆ ಮಾಡುವದರಿಂದ ಎಲ್ಲರಲ್ಲಿಯೂ ಸಾಮರಸ್ಯದ ಭಾವನೆ ಬೆಳೆಸುತ್ತದೆ ಎಂದು ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಮಾಜ ಸೇವಕ ಸಿ.ಬಿ.ಅಸ್ಕಿ(ಕೊಣ್ಣೂರ) ಅವರು ಹೇಳಿದರು.
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂದವರಿಗಾಗಿ ಅಸ್ಕಿ ಪೌಂಡೇಶನ್ ವತಿಯಿಂದ ಆಯೋಜಿಸಲಾದ ಇಪ್ತಿಯಾರ ಕೂಟ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಹಬ್ಬ ಹರಿದಿನಗಳು ಎಲ್ಲ ಧರ್ಮಿಯರನ್ನು ಒಗ್ಗೂಡಿಸುವಂತಹ ಸಂಖ್ಯೇತವಾಗಿದೆ ಹಿಂದೂ ಧರ್ಮದ ಹಬ್ಬಗಳಲ್ಲಿ ಮುಸ್ಲಿಂ ಬಾಂದವರನ್ನು ಕರೆದು ಸೌಹಾರ್ದತೆ ಮೇರೆಯುವದು ಮುಸ್ಲಿಂ ಬಾಂದವರ ಹಬ್ಬ ಹರಿದಿನಗಳಲ್ಲಿ ಹಿಂದೂ ಬಾಂದವರನ್ನು ಕರೆದು ಸೌಹಾರ್ದತೆಯೊಂದಿಗೆ ಸಾಮರಸ್ಯದ ಬಾಂದವ್ಯವನ್ನು ತೋರಿಸುವದಾಗಿದೆ ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ನಡೆದರೆ ಜಾತಿ ಮತ ಪಂಥಗಳು ದೂರಾಗುವದರ ಜೊತೆಗೆ ಸಹೋದರತೆ ಭಾವನೆ ಎಂಬುದು ಎಲ್ಲರಲ್ಲಿಯೂ ಮೂಡಲು ಸಾದ್ಯವಾಗಲಿದೆ ರಂಜಾನ ಹಬ್ಬ ಮುಸ್ಲಿಂ ಬಾಂದವರಿಗೆ ಪವಿತ್ರವಾದ ಹಬ್ಬವಾಗಿದ್ದು ಈ ಹಬ್ಬದ ಅಂಗವಾಗಿ ಕಳೆದ 8 ವರ್ಷಗಳಿಂದಲೂ ಕೊಣ್ಣೂರ ಗ್ರಾಮದಲ್ಲಿ ಮುಸ್ಲಿಂ ಬಾಂದವರಿಗಾಗಿ ಅಸ್ಕಿ ಪೌಂಡೇಶನ್ ನೇತೃತ್ವದಲ್ಲಿ ಇಪ್ತಿಯಾರಕೂಟವನ್ನು ಆಯೋಜಿಸುತ್ತಾ ಬರಲಾಗಿದ್ದು ಕೊಣ್ಣೂರ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂದವರು ಮೊದಲಿನಿಂದ ಬಂದ ಹಾಗೆಯೇ ಸಹೋದರತೆ ಭಾವನೆಯಿಂದ ಮುಂದುವರೆಯಲಿ ಎಂದು ಆಶಿಸಿದ ಅವರು ಅಸ್ಕಿ ಪೌಂಡೇಶನ್‍ವು ಈ ಇಪ್ತಿಯಾರ ಕೂಟವನ್ನು ಪ್ರತಿವರ್ಷ ವಿಸ್ತರಿಸುತ್ತಾ ಸಾಗಿದ್ದು ಈಗಾಗಲೇ ತಾಳಿಕೋಟೆ, ನಾಲತವಾಡ, ಮುದ್ದೇಬಿಹಾಳ ಪಟ್ಟಣಗಳಲ್ಲಿಯೂ ಪ್ರತಿವರ್ಷವು ಮುಂದುವರೆಸಿದ್ದು ಮುಂದಿನ ದಿನಗಳಲ್ಲಿ ತಾಲೂಕಿನಾಧ್ಯಂತ ವಿಸ್ತರಿಸುವ ಆಲೋಚನೆ ಹೊಂದಿದ್ದು ಎಲ್ಲ ಬಾಂದವರು ಸಹಕರಿಸುವದರೊಂದಿಗೆ ಇಪ್ತಿಯಾರ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಳ್ಳುವ ಮೂಲಕ ತೋರಿಸಿರುವ ಪ್ರೀತಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದರು.
ಅಂಜುಮನ್ ಕಮಿಟಿ ಅಧ್ಯಕ್ಷ ಬಂದೇನವಾಜ ಕಡಕೋಳ ಅವರು ಮಾತನಾಡಿ ಮುಸ್ಲಿಂ ಬಾಂದವರು ತಿಂಗಳ ಪರ್ಯಂತ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವದರೊಂದಿಗೆ ಆಚರಿಸುವ ಪವಿತ್ರ ರಂಜಾನ್ ಹಬ್ಬದಲ್ಲಿ ಉಪವಾಸ ವೃತ ಕೈಗೊಂಡು ಸಾಮರಸ್ಯದ ಬಧುಕನ್ನು ಸಾಗಿಸಲು ಮುಂದಾಗುತ್ತಾರೆ ಈ ಹಬ್ಬದ ಅಂಗವಾಗಿ ಪ್ರತಿವರ್ಷವು ಅಸ್ಕಿ ಪೌಂಡೇಶನ್ ನೇತೃತ್ವದಲ್ಲಿ ಕೊಣ್ಣೂರಿನ ಸಿ.ಬಿ.ಅಸ್ಕಿ ಅವರು ಇಪ್ತಿಯಾರಕೂಟವನ್ನು ಹಮ್ಮಿಕೊಂಡು ಮುಸ್ಲಿಂ ಬಾಂದವರ ಮೇಲೆ ತೋರಿಸಿರುವ ಪ್ರೀತಿ ವಾತ್ಸಲ್ಯ ಅಘಾದವಾದುದ್ದಾಗಿದ್ದು ಇವರ ಸೇವೆ ಹೀಗೆ ಮುಂದುವರೆಯಲಿ ದೇವರು ಅಸ್ಕಿ ಅವರಿಗೆ ಇನ್ನಷ್ಟು ಹೆಚ್ಚಿನ ಸೇವೆ ಒದಗಿಸುವ ಶಕ್ತಿ ನೀಡಲಿ ಎಂದರು.
ಇದೇ ಸಮಯದಲ್ಲಿ ಮುಸ್ಲಿಂ ಬಾಂದವರ ವತಿಯಿಂದ ಸಿ.ಬಿ.ಅಸ್ಕಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಮುಖಂಡರುಗಳಾದ ಬಸನಗೌಡ ಹಡಲಗೇರಿ, ಶಂಕರಗೌಡ ಹಿಪ್ಪರಗಿ, ಬಾಪುಗೌಡ ದ್ಯಾಪೂರ, ಗುರಣ್ಣ ಹತ್ತೂರ, ಮುದೆಪ್ಪಗೌಡ ಹಡ್ಲಗೇರಿ, ಈರಣ್ಣ ಯಾಳವಾರ, ವಿವೇಕಾನಂದ ದ್ಯಾಪೂರ, ತಿಪ್ಪಣ್ಣ ಬಡಿಗೇರ, ಬಸವರಾಜ ಹಡ್ಲಗೇರಿ, ಗೌಡಪ್ಪಗೌಡ ಹಡ್ಲಗೇರಿ, ಸೋಮನಗೌಡ ಹಡ್ಲಗೇರಿ, ಯಲ್ಲಪ್ಪ ಮಾದರ, ಮಹ್ಮದ ವಾಲಿಕಾರ, ಮುತ್ತುಗೌಡ ಹಿಪ್ಪರಗಿ, ಮಲ್ಲನಗೌಡ ದೊಡಗೌಡ, ರಮೇಶ ಕೊಟಗಿ, ಬಸವರಾಜ ನಾಯ್ಕೋಡಿ, ಚಾನರಡ್ಡಿ ದ್ಯಾಪೂರ, ರಾಮನಗೌಡ ಇಂಗಳಗಿ, ನಿವೃತ್ತ ಶಿಕ್ಷಕ ಜಿ.ಜಿ.ಅಸ್ಕಿ, ಎಂ.ಎನ್.ಅಸ್ಕಿ, ಕುಮಾರ ಐನಾಪೂರ, ಪ್ರಶಾಂತ ಜಲಪೂರ, ಅಶೋಕ ಬಿರಾದಾರ(ಎಲ್‍ಐಸಿ), ನಜೀರ ಸಾಲಿ, ಅಬ್ಜಲ್ ಅವಟಿ, ಅಶೋಕ ನಾಯ್ಕೋಡಿ, ವಿರೇಶ ಹಚಡದ, ಬಂದಗಿಸಾಬ ಕೊಳ್ಯಾಳ, ಶಿವರಾಜ ಹಡ್ಲಗೇರಿ, ಸಮೀರ ಅವಟಿ, ಮಹೇಶ ಅಸ್ಕಿ, ಅಸ್ಕಿ ಪೌಂಡೇಶನ್ ಉಪಾಧ್ಯಕ್ಷ ವೀರೇಶಗೌಡ ಅಸ್ಕಿ, ಮೊದಲಾದವರು ಉಪಸ್ಥಿತರಿದ್ದರು.