ರಾಜ್ಯಕ್ಕೆ 14 ಕಲ್ಯಾಣ ನಾಡಿಗೆ ಮೊದಲ ಸ್ಥಾನ ಪಡೆದ ಶಿಕ್ಷಕನ ಮಗ
ಅಫಜಲಪುರ:ಏ.10: ವಿದ್ಯೆಯೆಂಬುದು ಸೋಮಾರಿಯ ಸ್ವತ್ತಲ್ಲ, ಆದರೆ ಸಾಧಕನ ಸ್ವತ್ತು ಎಂಬ ಮಾತನ್ನು ಅಕ್ಷರಶಃ ಸತ್ಯ ಮಾಡಿದ್ದಾನೆ ಇಲ್ಲಿನ ವಿದ್ಯಾರ್ಥಿ. ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸ ಒಂದಿದ್ದರೆ ಸಾಕು ಸಾಧನೆಯ ಮೆಟ್ಟಿಲು ಹತ್ತಬಹುದು ಎನ್ನುವುದಕ್ಕೆ ಸೂಕ್ತ ಉದಾಹರಣೆ ಕಲ್ಯಾಣ ನಾಡಿನ ಮಾತೋಳಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಮಾಳಪ್ಪ ಪೂಜಾರಿ.
ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ನಿಸರ್ಗ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ಮಾಳಪ್ಪ ಪೂಜಾರಿಯು ಕಲಾ ವಿಭಾಗದಲ್ಲಿ 600 ಕ್ಕೆ 592 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 14ನೇ ಯಾರ್ಂಕ್ ಪಡೆದು ಮುನ್ನಡೆ ಸಾಧಿಸಿದ್ದಾನೆ.
ಕನ್ನಡ ವಿಷಯದಲ್ಲಿ 100, ಇತಿಹಾಸ ವಿಷಯದಲ್ಲಿ 100, ರಾಜ್ಯ ಶಾಸ್ತ್ರ ವಿಷಯದಲ್ಲಿ 100 ಅಂಕಗಳನ್ನು ಗಳಿಸಿದರೆ ಇಂಗ್ಲೀಷ್‍ನಲ್ಲಿ 96, ಅರ್ಥಶಾಸ್ತ್ರದಲ್ಲಿ 98, ಸಮಾಜ ಶಾಸ್ತ್ರದಲ್ಲಿ 98 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 14 ಮತ್ತು ಕಲ್ಯಾಣ ಕರ್ನಾಟಕದಲ್ಲಿ ಮೊದಲ ಸ್ಥಾನ ಪಡೆದು ಕಾಲೇಜಿನ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ಮೊದಲಿನಿಂದಲೂ ಮಾಳಪ್ಪ ಪೂಜಾರಿ ನಿರಂತರ ಅಭ್ಯಾಸ ಹಾಗೂ ಅಂದಿನ ಪಾಠವನ್ನು ಅಂದಿನ ದಿನವೇ ಅಭ್ಯಾಸ ಮಾಡಿ ನಿರಂತರವಾಗಿ ಶಿಕ್ಷಕರ ಮಾರ್ಗದರ್ಶನ ಪಡೆದು ಪರೀಕ್ಷೆಯಲ್ಲಿ ಸಫಲನಾಗಿದ್ದಾನೆ.
ಸೂರ್ಯಕಾಂತ ರಾಠೋಡ, ಮುಖ್ಯಸ್ಥರು ನಿಸರ್ಗ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜು ಅಫಜಲಪುರ.
ಪೆÇೀಷಕರ ಸಹಕಾರ ಮತ್ತು ಕಾಲೇಜಿನ ಉಪನ್ಯಾಸಕರ ಬೋಧನೆಯಿಂದ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಗಿದೆ.
ಮಾಳಪ್ಪ ಪೂಜಾರಿ, ವಿದ್ಯಾರ್ಥಿ.