ಸ್ವೀಪ್ ಸಮಿತಿಯಿಂದ ರಂಗೋಲಿ ಸ್ಪರ್ಧೆ
ಸೇಡಂ,ಎ,10: ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಮೇ 7 ರಂದು ಜರುಗಲಿರುವ ಅಂಗವಾಗಿ ತಾಲೂಕ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ರಂಗೋಲಿ ಸ್ಪರ್ಧೆ ಜರುಗಿತ್ತು.
ಪಟ್ಟಣದಲ್ಲಿರುವ ತಾಲೂಕ ಆಡಳಿತ ಸೌಧದ ಎದುರುಗಡೆ ತಾಲೂಕ ಸ್ವೀಪ್ ಸಮಿತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪುರಸಭೆ, ಸರ್ಕಾರಿ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳು ರಂಗೋಲಿ ಸ್ಪರ್ಧೆ ಭಾಗವಹಿಸಿ ಮತದಾರರಲ್ಲಿ ಮೇ 7 ರಂದು ಮತದಾನ ಮಾಡುವ ಜವಾಬ್ದಾರಿಯ ಕುರಿತು ವಿವಿಧ ಬಗೆಯ ರಂಗೋಲಿಗಳನ್ನು ಇಳಿಸುವ ಮೂಲಕ ಜಾಗೃತಿ ಮೂಡಿಸಿದರು. ಈ ವೇಳೆಯಲ್ಲಿ ತಾಲೂಕಾ ಸಹಾಯಕ ಚುನಾವಣೆ ಅಧಿಕಾರಿ ಆಶಪ್ಪ ಕೆಎಎಸ್, ತಹಶೀಲ್ದಾರ್ ಶಿವಾನಂದ್ ಮೇತ್ರೆ, ಇಓ ಚನ್ನಪ್ಪ ರಾಮಣ್ಣನವರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗದವನು ಉಪಸ್ಥಿತರಿದ್ದರು.