ಲಂಚಕ್ಕೆ ಬೇಡಿಕೆ ಇಟ್ಟ ಎಫ್.ಡಿ.ಎ. ಚಂದ್ರಶೇಖರ ಹೊಸಮನಿ ಲೋಕಾಯುಕ್ತ ಬಲೆಗೆ
ಬೀದರ. ಏ.10: ಬೀದರ ಲೋಕಾಯುಕ್ತ ಪೊಲೀಸ್ ಠಾಣೆ ಗುನ್ನೆ ನಂ. 04/2024 ಕಲಂ, 7(b) ಪಿಸಿ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018)ರ ಫಿರ್ಯಾದಿ ಶ್ರೀ ಶಿವಾಜಿರಾವ ದೇಶಮುಖ ರವರ ಪತ್ನಿ ಶ್ರೀಮತಿ ಬುಕಲಾಬಾಯಿ ಅವರ ಹೆಸರಿನ ಮೇಲೆ ಭಾಲ್ಕಿ ತಾಲ್ಲೂಕಿನ ಕೊಂಗಳಿ ಗ್ರಾಮದ ಹೊಲ ಸರ್ವೆ ನಂಬರ್ 60/*/8 ರಲ್ಲಿ ಒಟ್ಟು 3 ಎಕರೆ 34 ಗುಂಟೆ ಜಮ್ಮೀನು ಇದ್ದು, 2021ನೇ ಸಾಲಿನಲ್ಲಿ ಈ ಜಮೀನಿನ 1 ಎಕರೆ ಕಾರಂಜಾ ಯೋಜನೆಯಲ್ಲಿ ಮುಳುಗಡೆಯಾಗಿದೆ. ಕಾರಂಜಾ ಯೋಜನೆ ಅಡಿಯಲ್ಲಿ ಮುಳುಗಡೆಯಾದ 1 ಎಕರೆ ಜಮೀನಿಗೆ ಒಟ್ಟು 19 ಲಕ್ಷ ರೂಪಾಯಿ ಪರಿಹಾರ ಮಂಜೂರಾಗಿದ್ದು, ಕ.ನೀ.ನಿ.ನಿ.ಕೆ.ಪಿ.ಸಿ ವಿಭಾಗ ನಂ. 2 ಭಾಲ್ಕಿ, ಕಚೇರಿಯ ಶ್ರೀ ಚಂದ್ರಶೇಖರ ಎಫ್.ಡಿ.ಎ ಅವರಿಗೆ ಹೋಗಿ ಭೇಟಿಯಾಗಿ ಕಾರಂಜಾ ಯೋಜನೆ ಅರಿಯಲ್ಲಿ ಮುಳುಗಡೆಯಾದ ಜಮೀನಿನ ಪರಿಹಾರ ಧನ ಇನ್ನೂ ಖಾತೆಗೆ ಬಂದಿರುವುದಿಲ್ಲ, ಅಂತಾ ವಿಚಾರಿಸಲು ಸದರಿ ಫಿರ್ಯಾದಿ ಕಡೆಯಿಂದ ಅವರ ಹೆಂಡತಿಯ ಬ್ಯಾಂಕ್ ಪಾಸ್ ಬುಕ್ ಜೇರಾಕ್ಸ್ ಪಡೆದುಕೊಂಡು ಕಾರಂಜಾ ಯೋಜನೆಯಡಿಯಲ್ಲಿ ಮುಳಗಡೆಯಾದ 1 ಎಕರೆ ಜಮೀನಿಗೆ 19 ಲಕ್ಷ ರೂ. ಪರಿಹಾರ ಮಂಜೂರಾಗಿದ್ದು, ಈ ಹಣವನ್ನು ನಿಮ್ಮ ಹೆಂಡತಿಯ ಖಾತೆಗೆ ಜಮೆ ಮಾಡುತ್ತೇವೆ ಇದಕ್ಕಾಗಿ ನೀವು ಶೇ. 3% ರಂತೆ ಒಟ್ಟು 57,000 ರೂ.ಗಳನ್ನು ನೀಡುವಂತೆ ಲಂಚದ ಹಣ ಬೇಡಿಕೆ ಇಟ್ಟಿದ್ದಾರೆ.
ಫಿಯಾದಿ ಕೋರಿಕೆ ಮೇರೆಗೆ 30,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು ದಿ: 02-04-2024ರಂದು ಫಿರ್ಯಾದಿ ಅವರ ಹೆಂಡತಿ ಖಾತೆಗೆ ಜಮೆ ಮಾಡಿ, ಜಮಾ ಮಾಡಿದ ನಂತರವು ಲಂಚದ ಬೇಡಿಕೆ ಇಟ್ಟು ದಿನಾಂಕ 8-4-2024 ರಂದು ಆಪಾದಿತರು ಸದರಿ ಲಂಚ ಹಣ ಸ್ವೀಕರಿಸುವಾಗ ಬೀದರ ಲೋಕಾಯುಕ್ತ ಅಧಿಕಾರಿ ಮತ್ತು ಸಿಬ್ಬಂದಿಯವರು ಆಪಾದಿತರನ್ನು ವಶಕ್ಕೆ ಪಡೆದಿರುತ್ತಾರೆ ಸದರಿ ಆಪಾದಿತ ಚಂದ್ರಶೇಖರ ಹೊಸಮನಿ ಎಫ್.ಡಿ.ಎ ಕ.ನೀ.ನಿ.ನಿ.ಕೆ.ಪಿ.ಸಿ ವಿಭಾಗ ನಂ. 2 ಭಾಲ್ಕಿ, ಅವರನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ಹಾಗೂ ಲಂಚದ ರೂಪದಲ್ಲಿ ಪಡೆದ ನಗದು ಹಣ 30,000 ರೂ.ಗಳನ್ನು ಆಪಾದಿತರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಕಲಬುರಗಿ ವಿಭಾಗದ ಪೊಲೀಸ್ ಅಧೀಕ್ಷಕರಾದ ಅ್ಯಂಟೋನಿ ಜಾನ್. ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.