ಬೆಂಕಿಗೆ ಆಹುತಿಯಾದ ಬಣಿವೆ:  ಲಕ್ಷಾಂತರ ಮೌಲ್ಯದ ಹುಲ್ಲು ಭಸ್ಮ.
ಸಂಜೆವಾಣಿ ವಾರ್ತೆ
ಹೊಸಪೇಟೆ ಏ10: ಯಾರೋ ಕಿಡಿಗೇಡಿಗಳ ಕೈಚಳಕ ಲಕ್ಷಾಂತರ ಮೌಲ್ಯದ ಹಸುಗಳ ಆಹಾರವಾದ ಹುಲ್ಲಿನ ಬಣವೆ ಬೆಂಕಿಗಾಹುತಿಯಾದ ದಾರುಣ ಘಟನೆ ಮಂಗಳವಾರ ಸಂಜೆ ಜರುಗಿದೆ.
ಹೊಸಪೇಟೆ ತಾಲೂಕಿನ ಕಮಲಾಪುರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸೀತಾರಾಮ ತಾಂಡಾದ ಪಕ್ಕದ ಎನ್.ಆರ್ ಕ್ಯಾಂಪ್ ನಲ್ಲಿ ಸಂಜೆ ಯಾರೋ ಕಿಡಿಗೇಡಿಗಳು ಕೃಷ್ಣಮೂರ್ತಿ ಎಂಬುವವರ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ್ದು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಮೊದಲೆ ಬಿಸಿಲಿನ ಬೆಲೆಯಲ್ಲಿ ಸುಡುತ್ತಿದ್ದ ಹುಲ್ಲು ಕಿಡಿಗೇಡಿಗಳ ವಿಕೃತ ಮನಸ್ಸಿಗೂ 22 ಬಂಡಿ ನೆಲ್ಲಹುಲ್ಲು ಹಾಗೂ  12ಲೋಡ್ ಮೆಕ್ಕೆಜೋಳದ ದಂಟು ಸುಟ್ಟು ಕರಕಲಾಗೊದೆ.
ವಿಷಯ ತಿಳಿಯಯತ್ತಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಯು ಅಕ್ಕ ಪಕ್ಕದ ಆಗುವ ಅನಾಹುತ ತಪ್ಪಿಸಲು ಯಶಸ್ವಿಯಾಗಿದೆ.
ಈ ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ನಡೆಯುತ್ತಿದೆ. ಅಂದಾಜು ₹: 2.20ಲಕ್ಷ ಮೌಲ್ಯದ ಹುಲ್ಲು ಸುಟ್ಟಿದೆ ಎಂದು ಅಂದಾಜಿಸಲಾಗಿದೆ.