ಕ್ರೋಧಿನಾಮ ಸಂವತ್ಸರ “ಯುಗಾದಿ” ಪಂಚಾಂಗ ಶ್ರವಣ
ಸಂಜೆವಾಣಿ ವಾರ್ತೆ
ಹೊಸಪೇಟೆ ಏ10: ಹೊಸ ವರ್ಷ ನಮ್ಮ ಆತ್ಮಾವಲೋಕನದೊಂದಿಗೆ ಹೊಸ ಹೊಸ ವಿಚಾರಗಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಚಿಂತಾಮಣಿ ಮಠದ ಪೂಜ್ಯ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ತಿಳಿಸಿದರು.
ಅವರು ಮಂಗಳವಾರ ಸಂಜೆ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ನೂತನ ಕ್ರೋಧಿ ನಾಮ ಸಂವತ್ಸರದ ಪಂಚಾಂಗ ಶ್ರವಣದ ನಂತರ ತಮ್ಮ ರಚನೆಯ ಶ್ರೀ ಶಂಕರಾಚಾರ್ಯ ಸಹಸ್ರನಾಮಾವಳಿ ಲೋಕಾರ್ಪಣೆ ಮಾಡಿ ಆರ್ಶಿವಚನದಲ್ಲಿ ನಾವು ಜಗತ್ತನನ್ನು ಬದಲಾಯಿಸಲು ಸಾಧ್ಯವಿಲ್ಲಾ ಎನ್ನುವುದಾದರೆ ನಾವು ಬದಲಾಗುವುದು ಉತ್ತಮ ಕ್ರಮ ಎಂದು ಖ್ಯಾತ ಕವಿ ಡಿ.ವಿ.ಗುಂಡಪ್ಪ ಹಾಗೂ ಬಸವಣ್ಣನವರ ಉಕ್ತಿಗಳನ್ನು ಹೇಳುವ ಮೂಲಕ ಆದಿ ಗುರು ಶಂಕರರು ಸಹ ಪೂರ್ವದಲ್ಲಿಯೇ ಇಂತಹ ಅನೇಕ ನಿದರ್ಶನಗಳನ್ನು ತಿಳಿಸಿ ಪ್ರಕೃತಿಯ ಬದಲಾವಣೆಗಳನ್ನು ತಿಳಿಸಿದ್ದು ನಾವು ಬದಲಾಗದಿದ್ದರೆ ಪ್ರಕೃತಿಯೇ ಬದಲಾಯಿಸುತ್ತದೆ ಎನ್ನವುದಕ್ಕೆ ಉದಾಹರಣೆಗಳ ಮೂಲಕ ವಿವರಣೆ ನೀಡಿದರು.
ವಿದ್ವಾನ ಗಣೇಶ ಗೋಸಾವಿ ಪಂಚಾಂಗ ಶ್ರವಣ ಮಾಡಿ ವರ್ಷದ ರಾಷ್ಟ್ರ ಮತ್ತು ರಾಜ್ಯ ಹಾಗೂ ಸ್ಥಳೀಯ ಹಾಗೂ ದ್ವಾದಶ ರಾಶಿಗಳ ಭವಿಷ್ಯ ಕುರಿತು ಮಾಹಿತಿ ನೀಡಿದರು.
ಇದೆ ಸಂದರ್ಭದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ, ಧಾರ್ಮಿಕ ಚಿಂತನೆಗಳು ನಡೆದವು ನಂತರ ಬೇವು ಬೆಲ್ಲಾ ಹಂಚಿ ಸಂಭ್ರಮಿಸಲಾಯಿತು.