ಕುಡಿಯುವ ನೀರಿನ ವ್ಯವಸ್ಥೆ
ಲಕ್ಷ್ಮೇಶ್ವರ,ಏ.10: ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗ ತೊಡಗಿದ್ದು ಬಿಸಿಲಿನ ಬೇಗೆಗೆ ಬಸವಳಿದು ಜನಸಾಮಾನ್ಯರು ಹೈರಾಣವಾಗತೊಡಗಿದ್ದಾರೆ ಬೀಸುತ್ತಿರುವ ಬಿಸಿಗಾಳಿ ಮತ್ತಷ್ಟು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಪಟ್ಟಣಕ್ಕೆ ಪ್ರತಿನಿತ್ಯ ಏನಿಲ್ಲವೆಂದರು ಸುಮಾರು 35 ರಿಂದ 40,000 ಜನರು ವ್ಯಾಪಾರ ವಹಿವಾಟಿಗಾಗಿ ಬಂದು ಹೋಗುತ್ತಿದ್ದಾರೆ ಆದರೆ ಸುಡುತ್ತಿರುವೆ ಬಿಸಿಲಿನ ಬೇಗೆಗೆ ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರು.
ಈಗ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಎಂಜಿಎಂ ಫೌಂಡೇಶನ್ ವತಿಯಿಂದ ನೀರಿನ ಅರವಟ್ಟಿಗೆಗಳನ್ನು ಆರಂಭಿಸಲಾಗಿದ್ದು ಬಾಯಾರಿಕೆಯನ್ನು ಹಿಂಗಿಸಲು ಸಂಸ್ಥೆ ಪ್ರಮುಖ ಸ್ಥಳಗಳಲ್ಲಿ ನೀರಿನ ಅರವಟ್ಟಿಗೆಗಳನ್ನು ಆರಂಭಿಸಿದೆ.
ಪಟ್ಟಣದ ಹನುಮಂತ ದೇವರ ದೇವಸ್ಥಾನ ಭಾನು ಮಾರ್ಕೆಟ್ ಮಲ್ಲಿಕಾರ್ಜುನ ಏಜೆನ್ಸಿ ಎಂಜಿಎಂ ಮಾರ್ಟ್ ಶಿಗ್ಲಿ ಕ್ರಾಸಿನ ನವೀನ್ ಮೊಬೈಲ್ ಸೇರಿದಂತೆ ನೀರಿನ ಅರವಟ್ಟಿಗೆಗಳನ್ನು ಆರಂಭಿಸಿದೆ.
ಎಂಜಿಎಂ ಫೌಂಡೇಶನ್ ಬಸವೇಶ್ ಮಹಾಂತ ಶೆಟ್ಟರ್ ಹೇಳಿಕೆ ನೀಡಿ ಬಿಸಿಲಿನಿಂದ ಜನತೆಯನ್ನು ಕಂಡು ಕುಡಿಯುವ ನೀರಿನ ವ್ಯವಸ್ಥೆಗಾಗಿ ಸಾರ್ವಜನಿಕ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ಆರಂಭಿಸಲಾಗಿದೆ ವ್ಯಾಪಾರಸ್ಥರು ಸಾರ್ವಜನಿಕರು ಸಹಕರಿಸಿದರೆ ಎಲ್ಲಾ ಭಾಗದಲ್ಲಿಯೂ ಗ್ರಾಮೀಣ ಪ್ರದೇಶದ ಜನರಿಗೆ ಸಕಾಲಿಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಾರೆ.