ಚುನಾವಣಾ ಪೂರ್ವಭಾವಿ ಸಭೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.10:  ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದ ಹಡಗಲಿ-ಇಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ  ಪೂರ್ವಭಾವಿ ಕಾರ್ಯಕ್ರಮ ಇಂದು ಜರುಗಿತು. ಕಾಂಗ್ರೆಸ್ ನ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಈ.ತುಕಾರಾಮ್  ರವರೊಂದಿಗೆ ಮಾಜಿ ಸಚಿವ  ಪಿ.ಟಿ. ಪರಮೇಶ್ವರ ನಾಯ್ಕ್, ಮಾಜಿ ಶಾಸಕರುಗಳಾದ ಸಿರಾಜ್ ಶೇಖ್, ,ಕೆ.ಎಸ್.ಎಲ್ ಸ್ವಾಮಿ, ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ  ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅಟವಾಳಿಗಿ  ಕೊಟ್ರೇಶ , ಬಿ. ಹನುಮಂತಪ್ಪ ಇಟಗಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹೂವಿನ ಹಡಗಲಿ ಕಾಂಗ್ರೆಸ್ ಪಕ್ಷದ ಮುಖಂಡರು ಜೊತೆ ಸೇರಿ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಸಿದರು.
ಈ ಸಂದರ್ಭದಲ್ಲಿ ಈ ತುಕಾರಾಮ್ ರವರು ಮಾತನಾಡಿ,  ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನ ಬದ್ದ ಆಡಳಿತಕ್ಕಾಗಿ ಸರ್ವೋದಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಮತ್ತು ಮತ ಹಾಕಿಸಿ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.