ದತ್ತಿ ಕಾರ್ಯಕ್ರಮ
ಧಾರವಾಡ,ಏ.10: ಬಾಲ್ಯದಿಂದಲೇ ನಾವು, ನೀವೆಲ್ಲಾಆಡಿ, ನೋಡಿ ಕೇಳಿದ ಜಾನಪದ ಆಟಗಳಾದ ಲಡ್ಡುಲಡ್ಡುತಿಮ್ಮಯ್ಯ, ಆನೆ ಬಂತವ್ವ ಆನೆ ಹಾಗೂ ಹತ್ತಿಕಟಿಗಿ ಬತ್ತಿಕಟಗಿ ಎಂಬ ಹಾಡುಗಳು ಪ್ರೇಕ್ಷಕರಿಗೆರಂಜನೆ ನೀಡಿದವು. ಆಧುನಿಕತೆಯ ಭರದಲ್ಲಿ ನಶಿಸಿ ಹೋಗುತ್ತಿರುವಜಾನಪದ ಶೈಲಿಯ ಆಟಗಳು ಮುಂದಿನ ಪೀಳಿಗೆ ಸ್ಮರಿಸುವಂತೆ ಪ್ರದರ್ಶಿಸಿದ್ದು ಶ್ಲ್ಯಾಘನೀಯಎಂದು ಕ.ವಿ.ವ. ಸಂಘದ ಉಪಾಧ್ಯಕ್ಷೆ ಸಾಹಿತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ನುಡಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದಖ್ಯಾತಜಾನಪದ ವಿದ್ವಾಂಸಡಾ. ದೇವೇಂದ್ರಕುಮಾರ ಹಕಾರಿಸಂಸ್ಮರಣದತ್ತಿಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಧಾರವಾಡದ ಶ್ರೀ ಕುಮಾರೇಶ್ವರ ಮಹಿಳಾ ಮಂಡಳದ ವತಿಯಿಂದಯುಗಾದಿ, ಪಂಚಮಿ ಹಾಗೂ ಸಂಕ್ರಾಂತಿಯಗ್ರಾಮೀಣ ಸೊಗಡಿನ ನೈಜಚಿತ್ರಣ ಬಿಂಬಿಸುವ ಜಾನಪದ ಹಾಡುಗಳನ್ನು ತಂಡದವರು ಮನೋಜ್ಞವÁಗಿ ಪ್ರಸ್ತುತ ಪಡಿಸಿದರು.
ಡಾ. ದೇವೇಂದ್ರಕುಮಾರ ಹಕಾರಿಯವರ ಭಾವಚಿತ್ರಕ್ಕೆಗಣ್ಯರು ಪುಷ್ಪನಮನ ಸಲ್ಲಿಸಿದರು. ವೇದಿಕೆಯಲ್ಲಿದತ್ತಿದಾನಿ ರವಿಶಂಕರ ಹಕಾರಿ, ಕುಮಾರೇಶ್ವರ ಮಹಿಳಾ ಮಂಡಳದ ಅಧ್ಯಕ್ಷ್ಯೆ ಜಯಶ್ರೀ ಪಾಟೀಲ, ವೀರಣ್ಣಒಡ್ಡೀನ, ಡಾ. ಶೈಲಜಾಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿಇದ್ದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಕುಮಾರೇಶ್ವರ ಮಹಿಳಾ ಮಂಡಳದ ಜಾನಪದ ಕಲಾ ತಂಡದ ಸದಸ್ಯರಾದ ಪದ್ಮಾವತಿ ಮಠಪತಿ, ಸುಮಂಗಲಾ ಕಿತ್ತೂರಮಠ, ಕವಿತಾ ಕಾಳಿ, ಚೈತ್ರಾ ಸಂತಿ ಸೇರಿದಂತೆ ಮುಂತಾದವರಿದ್ದರು.