ಪಿಯು ಕಲಾ ವಿಭಾಗದಲ್ಲಿರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊಟ್ಟೂರಿನ ಕವಿತ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.10: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಇಂದು ಪಿಯು ಕಾಲೇಜಿನ‌ ಕಲಾ ವಿಭಾಗದ ಕವಿತ 596 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೂವರಲ್ಲಿ ಒಬ್ಬರಾಗಿದ್ದಾರೆ.
ಈ ಕಾಲೇಜಿನಲ್ಲಿ ಕಳೆದ 9 ವರ್ಷದಿಂದ ಮೊದಲ ಸ್ಥಾನವನ್ನು ವಿದ್ಯಾರ್ಥಿಗಳು ಪಡೆಯುತ್ತಲೇ ಬಂದಿದೆ.
ಜಿಲ್ಲೆಯವರಾದ ಇಂದು ಪಿಯು ಕಾಲೇಜಿನ ಕಾಲೇಜಿನ ಶಶಿಧರ 594, ಬೀರೇಶ್ 593, ಹಡಗಲಿಯ ಎಸ್ಎಂಎಂ ಪಿಯು ಕಾಲೇಜಿನ ಅನುಶ್ರೀ 594,  ಶ್ರೀ ಪಂಚಮಸಾಲಿ ಕಾಲೇಜಿನ ಪಿ.ವೀರೇಶ್ 592 ಅಂಕಗಳಿಸಿ ಸಾಧನೆ ಮಾಡಿದ್ದಾರೆ.
ಸಂಜೆವಾಣಿ ಜೊತೆ ಮಾತನಾಡಿದ ಕವಿತ. ಆರಂಭದಿಂದಲೂ ಉತ್ತಮ ಅಂಕ ಪಡೆಯಬೇಕು ಎಂಬ ಹಂಬಲ ಹೊಂದಿದೆ. ಸಂಜೆ 7 ರಿಂದ ರಾತ್ರಿ 11ರ ವರೆಗೆ ಮತ್ತು ಬೆಳಗಿನ ಜಾವ 4 ರಿಂದ 6 ವರೆಗೆ  ಓದುತ್ತಿದ್ದೆ. ಜೊತೆಗೆ ಕಾಲೇಜಿನಲ್ಲೂ ಉಥತಮ ಅಂಕಗಳಿಸಲು ಹೇಗೆ ಉತ್ತರಗಳನ್ನು ಬರೆಯಬೇಕು ಎಂಬುದನ್ನು ಪ್ರಾಕ್ಟೀಸ್ ಮಾಡಿಸುತ್ತಿದ್ದರೆಂದರು. ತಂದೆ ಕೃಷಿಕ, ತಾಯಿ ಟೈಲರಿಂಗ್ ಮಾಡುತ್ತಿದ್ದಾರೆ. ಕೂಡ್ಲಿಗಿ ತಾಲೂಕಿನ ಚೌಡಾಪುರದಿಂದ ಪ್ರತಿನಿತ್ಯ ಬಸ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದಳು. ಪ್ರಥಮ ಸ್ಥಾನ ಲಭಿಸಿರುವುದಕ್ಕೆ ಖುಷಿಯಾಗಿದೆ. ಪದವಿ ಮಾಡಿ ಕೆ.ಎ.ಎಸ್ ಮಾಡುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾಳೆ.