ಬಸವೇಶ್ವರ ನಗರದಲ್ಲಿಪಂಚಾಂಗ ಶ್ರವಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.10: ಇಲ್ಲಿನ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದಲ್ಲಿ  ನಿನ್ನೆ ಸಂಜೆ ನೂತನ ಕ್ರೋಧಿ ನಾಮ ಸಂವತ್ಸರದ  ಪ್ರಯುಕ್ತ ಪಂಚಾಗ  ಶ್ರವಣ ನಡೆಯಿತು.
ವೇದಮೂರ್ತಿ ಶ್ರೀ ಮರಿಸ್ವಾಮಿಗಳು ಪಂಚಾಂಗ ಶ್ರವಣ  ನಡೆಸಿಕೊಟ್ಟರು. ಸುತ್ತಮುತ್ತಲಿನ ಬಡಾವಣೆಯ ಭಕ್ತಾದಿಗಳು ಇದರಲ್ಲಿ ಪಾಲ್ಗೊಂಡು ತಮ್ಮ ತಮ್ಮ ಭವಿಷ್ಯದ ಕುರಿತು ಪ್ರಶ್ನೆ ಕೇಳಿ ಪರಿಹಾರ ತಿಳಿದುಕೊಂಡರು. ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.