ವಿದ್ಯೆ ಯಾರ ಸ್ವತ್ತು ಅಲ್ಲ… ಕೊಟ್ಟೂರಿನ ಶಾಲಿನಿಗೆ 586
ಎನ್.ವೀರಭದ್ರಗೌಡ
ಬಳ್ಳಾರಿ, ಏ.1: ತಂದೆ ಬಡತನದಿಂದಾಗಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯದಾಗದಿದ್ದನ್ನು, ಮಕ್ಕಳ ಮೂಲಕ ಪಡೆಯಲು ಓರ್ವ ಬೀಗ ರಿಪೇರಿ ಮಾಡುವ ಜೋಗಿ ಸಮುದಾಯದ ವ್ಯಕ್ತಿ ಯಶಸ್ವಿಯಾಗಿದ್ದಾನೆ. ಈ ಮೂಲಕ ವಿದ್ಯೆ ಯಾರ ಸ್ವತ್ತು ಅಲ್ಲ ಎಂಬುದನ್ನು ಮಕ್ಕಳು ಸಾಬೀತು ಮಾಡುತ್ತಿದ್ದಾರೆ.
ಕೊಟ್ಟೂರಿನ ತೇರು ಗಡ್ಡೆ ಬಳಿ ಪತ್ನಿ ತೆಂಗಿನಕಾಯಿ ಮತ್ತಿತರೆ ಸಾಮಾಗ್ರಿ ಮಾರಾಟ ಮಾಡಿದರೆ. ನಾಗರಾಜ್ ಬೀಗ ರಿಪೇರಿ ಮಾಡುವ ಕೆಲಸ ಮಾಡುತ್ತಾನೆ‌.
ತಾನು ಇತರರಂತೆ ಕಲಿತು ಉತ್ತಮ ಜೀವನ ಸಾಗಿಸಬೇಕೆಂಬ ಹಂಬಲ ಹೊಂದಿದ್ದ ನಾಗಾರಜನಿಗೆ ಬಡತನ ಅಡ್ಡಿಯಾಗಿತ್ತು. ಅದಕ್ಕಾಗಿ ಎಂಟನೇ ತರಗಿತಿ ವರೆಗೆ ಓದಿ ನಂತರ ದುಡಿಮೆಗೆ ನಿಂತಿದ್ದ.
ಆದರೆ ತಾನು ಸಾಧಿಸಲಾರದ್ದನ್ನು ಮಕ್ಕಳ ಮೂಲಕ ಸಾಧಿಸಬೇಕೆಂಬ ಛಲದಿಂದ  ಬಡತನದ ಬೇಗೆಯಲ್ಲೂ ಮೂವರು ಮಕ್ಕಳನ್ನು ಶಾಲೆಗೆ ಕಳಿಸಿದ್ದಾನೆ.
ಮೊದಲ ಮಗಳು ಇಗ ಬಿಕಾಂ ಓದುತ್ತಿದ್ದಾಳೆ. ಮಗ ಒಂಭತ್ತನೇ ತರಗತಿ ಓದುತ್ತಿದ್ದಾನೆ
ಎರಡನೇ ಮಗಳು  ಕೊಟ್ಟೂರಿನ  ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿಯೇ ಓದಿದ ಶಾಲಿನಿ. ಇದೀಗ ಪ್ರಕಟಗೊಂಡಿರುವ ದ್ವಿತೀಯ  ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ  ಕಲಾ ವಿಭಾಗದಲ್ಲಿ 586 ಅಂಕಗಳಿಸಿ ಸಾಧನೆ ಮಾಡಿದ್ದಾಳೆ.
ಕನ್ನಡದಲ್ಲಿ 98, ಸಂಸ್ಕೃತ ದಲ್ಲಿ 99, ಶಿಕ್ಷಣದಲ್ಲಿ 97, ಇತಿಹಾಸದಲ್ಲಿ 90, ರಾಜ್ಯ ಶಾಸ್ತ್ರದಲ್ಲಿ 97 ಮತ್ತು ಐಚ್ಚಿಕ ಕನ್ನಡದಲ್ಲಿ 99 ಅಂಕಪಡೆದಿದ್ದಾಳೆ.
ಸಂಜೆವಾಣಿ ಜೊತೆ ಮಾತನಾಡಿದ ಶಾಲಿನಿ ಐದು ವರ್ಷಗಳ ಕಾನೂನು ಪದವಿ ಪಡೆದು, ಅನ್ಯಾಯದ ವಿರುದ್ದ ಹೋರಾಡುವ ಉತ್ತಮ ವಕೀಲೆ ಆಗಬೇಕೆಂಬ ಬಯಕೆ ವ್ಯಕ್ತಪಡಿಸಿದ್ದಾಳೆ.