ಸಾಹಿತಿ ಸಿಪಿಕೆಗೆ 85ರ ಸನ್ಮಾನ
ಸಂಜೆವಾಣಿ ನ್ಯೂಸ್
ಮೈಸೂರು: ಏ.10:- 85 ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೆ. ಅವರನ್ನು ವಾಟಾಳ್ ನಾಗರಾಜ್ ಅಭಿಮಾನಿಗಳ ಸಂಘದ ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸನ್ಮಾನಿಸಿದರು.
ಈ ವೇಳೆ ಈ ಬಾರಿಯ ಲೋಕಸಭಾ ಚುನಾವಣೆ ಕುರಿತಂತೆ ಮಾತನಾಡಿ, ತಾವೂ ಸಹ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇದುವರೆಗೆ ಗೆದ್ದುದಕ್ಕಿಂತ ಸೋತಿರುವುದೇ ಹೆಚ್ಚಾಗಿದೆ. ಆದರೂ ಸಂಸತ್‍ನಲ್ಲಿ ಕನ್ನಡ ಪರ ಧ್ವನಿಯೆತ್ತಬೇಕೆಂದು ನಿರ್ಧರಿಸಿ ಸ್ಪರ್ಧಿಸಿದ್ದೇನೆ. ರಾಜ್ಯದ ಯಾವೊಬ್ಬ ಸಂಸದರೂ ನಾಡು, ನುಡಿ, ಜಲ, ಭಾಷೆ ಬಗ್ಗೆ ಧ್ವನಿಯೆತ್ತಿಲ್ಲ.
ಈಗ ಚುನಾವಣೆಗಳಿಗೆ ಅರ್ಥ ಹೋಗಿದೆ. ಕಾಯಂ ಆಗಿ ಜೈಲಿನಲ್ಲಿರಬೇಕಾದವರೆಲ್ಲ ಈಗ ಸ್ಪರ್ಧಿಸಿದ್ದಾರೆ. ಮುಂದೆ ಚುನಾಯಿತರೂ ಆಗಬಹುದಾಗಿದೆ. ಚುನಾವಣೆ ಈಗ ದರೋಡೆಯಾಗಿದೆ. ಹಣವುಳ್ಳವರು ಮಾತ್ರ ನಿಲ್ಲುವಂತಾಗಿದೆ. ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್‍ಗಳನ್ನು ಮನೆಯವರುಗಳೇ ಹಂಚಿಕೊಂಡಿದ್ದಾರೆ. ಇನ್ನು, ಬೇಕಿದ್ದರೆ ಯದುವೀರ್ ಅವರಿಗೆ ರಾಜ್ಯಸಭಾ ಸ್ಥಾನ ನೀಡಬಹುದಾಗಿತ್ತು. ಆದರೆ ಅವರು ಚುನಾವಣೆಗೆ ಏಕೆ ಸ್ಪರ್ಧಿಸಿದರೋ ತಿಳಿಯದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ, ಲಾರಿಗಟ್ಟಲೆ ಹೂಗಳನ್ನು ಮೈಮೇಲೆ ಎರಚಿಸಿಕೊಳ್ಳುವ ಪ್ರವೃತ್ತಿ ಪ್ರಧಾನಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ಇದೇ ವೇಳೆ, ಡಾ.ಸಿ.ಪಿ.ಕೆ. ಅವರೊಡನೆ ತಮಗೆ ಹಲವಾರು ದಶಕಗಳ ಬಾಂಧವ್ಯವಿದೆ. ಆದರ್ಶ, ಪ್ರೀತಿ, ಅಭಿಮಾನಕ್ಕೆ ಅವರು ಸಂಕೇತವಾಗಿದ್ದಾರೆ. ಅವರ ಹಿನ್ನೆಲೆ ಗಮನಿಸಿ ಅವರ 85 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೌರವಿಸಲಾಗುತ್ತಿದೆ ಎಂದರು.
ತಾಯೂರು ವಿಠ್ಠಲಮೂರ್ತಿ, ಶಿವಶಂಕರ್, ಪೆÇ್ರ.ಎಸ್. ಶಿವರಾಜಪ್ಪ, ವೇಣುಗೋಪಾಲ್ ಇದ್ದರು.