ಮಾತು ಕೊಟ್ಟಂತೆ ರಾಜ್ಯದಿಂದ ಅನುದಾನ ಸಚಿವ ಬೈರತಿ ಭರವಸೆ
ಕೋಲಾರ,ಸೆ,೨೦- ಕೋಲಾರ ನಗರಾಭಿವೃದ್ದಿ ಪ್ರಾಧಿಕಾರ ವ್ಯಾಪ್ತಿಗೆ ಸೇರಿದ ವರ್ತೂಲ ರಸ್ತೆಗೆ ಮಂಜೂರಾಗಿದ್ದ ೧೫೦ ಕೋಟಿ ರೂಗಳನ್ನು ಕೇಂದ್ರ ಸರ್ಕಾರವು ನಮ್ಮ ಗಮನಕ್ಕೆ ಬಾರದಂತೆ ವಾಪಾಸ್ಸ್ ಪಡೆದಿರುವುದು ಅದರೂ ಕೋಲಾರಕ್ಕೆ ವರ್ತೂಲ ರಸ್ತೆ ನಿರ್ಮಾಣ ಮಾಡುವುದಾಗಿ ಈಗಾಗಲೇ ಜನತೆಗೆ ಮಾತು ಕೊಟ್ಟಿದ್ದೇವೆ. ಅದನ್ನು ಈಡೇರಿಸ ಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದ ವರ್ತೂಲ ರಸ್ತೆ ನಿರ್ಮಾಣ ಮಾಡಿಸಲು ಅಗತ್ಯ ಕ್ರಮ ತೆಗೆದು ಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು,
ನಗರದ ಜಿಲ್ಲಾ ಪಂಚಾಯತ್‌ನಲ್ಲಿ ಆಯೋಜಿಸಿದ್ದ ಕೆ.ಡಿ.ಬಿ. ಸಭೆಯ ನಂತರ ಮಾದ್ಯಮದವರೊಂದಿಗೆ ಅವರು ಮಾತನಾಡಿ ಕೋಲಾರ ಜಿಲ್ಲೆಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳು, ಕಾನೂನು ಸುವ್ಯವಸ್ಥೆಗಳು, ರೈತರಿಗೆ ಕಳಪೆ ಬಿತ್ತನೆ ವಿತರಣೆ, ಆಂಧ್ರ ಪ್ರದೇಶದ ಖಾಸಗಿ ಬಸ್‌ಗಳು ಪರವಾನಗಿ ಪಡೆದ ಮಾರ್ಗದಲ್ಲಿ ಸಂಚರಿಸದೆ ಅಕ್ರಮವಾಗಿ ಅನಧಿಕೃತ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಕುರಿತು, ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಸಿ.ಎಲ್.೭ ಪರವಾನಗಿಯನ್ನು ಕಾನೂನು ಬಾಹಿರವಾಗಿ ವಿತರಣೆ ಮಾಡಿರುವುದು ಹಾಗೂ ನರ್ಸ್ಸರಿಗಳು ಯಾವ ಇಲಾಖೆ ವ್ಯಾಪ್ತಿ ಸೇರುತ್ತದೆ ಎಂಬ ಬಗ್ಗೆ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ಸುದೀರ್ಘವಾದ ಚರ್ಚೆಗಳಾದವು ಎಂದರು,
ಕೋಲಾರಮ್ಮ ಕೆರೆ ಕಟ್ಟೆಯ ಭಾಗದಲ್ಲಿ ನಿರ್ಮಿಸಿರುವ ವಾಕಿಂಗ್ ಪಾಥ್ ಕಾಮಗಾರಿ ಮತ್ತು ಬೈಪಾಸ್ ರಸ್ತೆಯಲ್ಲಿ ನೊತನವಾಗಿ ನಿರ್ಮಿಸಿರುವ ಮಕ್ಕಳ ಉದ್ಯಾನವನ್ನು ಲೋಕಾರ್ಪಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು ಎರಡನೇ ಹಂತದ ಕಾಮಗಾರಿಯನ್ನು ನಿಲ್ಲಿಸಿ ಮೊದಲ ಹಂತದಲ್ಲಿ ಪೂರ್ಣಗೊಂಡಿರುವ ಅಭಿವೃದ್ದಿಯನ್ನು ಲೋಕಾರ್ಪಣೆ ಮಾಡಬೇಕೆಂದು ತಿಳಿಸಲಾಗಿದೆ ಎಂದು ಹೇಳಿದರು,
ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಗಾಂಜಾ ಪ್ರಕರಣ, ಗುಂಡಾಗಿರಿಯ ರೌಡಿ ಪ್ರಕರಣಗಳ ಬಗ್ಗೆ ಯಾವೂದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದೆ, ಶಾಲಾ ಕಾಲೇಜು ವ್ಯಾಪ್ತಿಗಳಲ್ಲಿ, ವಸತಿ ನಿಲಯಗಳ ಬಳಿ ಡ್ರಾಗ್ಸ್ ಮಾದಕ ವಸ್ತುಗಳ ಮಾರಾಟ ಸೇವನೆಯ ಹಾವಳಿಯನ್ನು ನಿಯಂತ್ರಿಸಲು ಮುಖ್ಯ ಮಂತ್ರಿಗಳು ಕಟ್ಟು ನಿಟ್ಟಿನ ಆದೇಶ ಜಾರಿ ಮಾಡಿರುವುದನ್ನು ಜಾರಿಗೆ ತಂದು ಕರ್ನಾಟಕವನ್ನು ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡಲು ಪ್ರತಿಯೊಂದು ಇಲಾಖೆಯು ಸಹಕಾರ ನೀಡಬೇಕೆಂದು ಸೂಚಿಸಿದ್ದಾರೆ ಅದನ್ನು ಅನುಷ್ಠನಕ್ಕೆ ತರಬೇಕಾಗಿರುವುದು ನಮ್ಮ ಮೇಲಿದೆ ಎಂದರು.
ಕೋಲಾರದ ಅಭಿವೃದ್ದಿಗೆ ಈಗಾಗಲೇ ೧೨೬ ಕೋಟಿ ರೂ ಅನುದಾನವನ್ನು ತಂದಿದ್ದು ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗಿದೆ. ರೈತರಿಗೆ ಮಳೆ ವಿಫಲತೆಯಿಂದ ಉಂಟಾಗಿರುವ ನಷ್ಟದ ವರದಿಯನ್ನು ೪ ದಿನದಲ್ಲಿ ನೀಡಲು ಸೊಚಿಸಿದ್ದು, ಇದನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಪರಿಹಾರದ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು,
ಈ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಗ್ಯಾರೆಂಟಿ ಅನುಷ್ಠನ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ. ಶಾಸಕ ಕೊತ್ತೂರು ಮಂಜುನಾಥ್ ಹಾಜರಿದ್ದರು,