ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ನಿಮಿತ್ತ ರಕ್ತದಾನ ಶಿಬಿರ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೦: ನಗರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆವರಣದಲ್ಲಿ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಹಾಗೂ ಬಿಜೆಪಿ ನಗರ ಮಂಡಲ ಯುವ ಮೋರ್ಚಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ವಿಶ್ವ ನಾಯಕರಾದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವನ್ನು ಉಪಕಾರಿ ಕಾರ್ಯದ ಮೂಲಕ ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಕೂಡ ರಕ್ತದಾನ ಮಾಡಿ, ರಕ್ತದ ಅವಶ್ಯಕತೆ ಇರುವವರಿಗೆ ಕಲ್ಪಿಸುವ ಪುಣ್ಯದ ಕೆಲಸ ಮಾಡೋಣ ಎಂದರು.
ಪದಾಧಿಕಾರಿಗಳಾದ ಪ್ರವೀಣ ವಂದಾಲ, ರಾಚು ಬಿರಾದಾರ, ಲಕ್ಷಿö್ಮÃ ಕನ್ನೊಳ್ಳಿ, ಸಾಯಿ ಪ್ರಕಾಶ, ವಿಜಯಕುಮಾರ ಗಚ್ಚಿನಕಟ್ಟಿ ಸೇರಿದಂತೆ ಮತ್ತಿತರರು ರಕ್ತದಾನ ಮಾಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ಕುಮಾರ ಗಡಗಿ, ಮಳುಗೌಡ ಪಾಟೀಲ, ಮುಖಂಡರಾದ ಈರಣ್ಣ ರಾವೂರ್, ಪಾಪುಸಿಂಗ್ ರಜಪೂತ, ಪ್ರವೀಣ ಕೂಡಗಿ, ಪ್ರವೀಣ ನಾಟೀಕಾರ, ಪ್ರಕಾಶ ಚವ್ಹಾಣ, ಸುವರ್ಣ ಕುರ್ಲೆ, ಪ್ರೇಮ ಕಲ್ಕುಟಿಗಿ ಹಾಗೂ ಜೆ.ಎಸ್.ಎಸ್ ಆಸ್ಪತ್ರೆ ಸಿಬ್ಬಂದಿಗಳು ಇದ್ದರು.