ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ತೆರೆದಿರುವ ಅಂಗಡಿ
ಸಂಜೆವಾಣಿ ವಾರ್ತೆ
ಹನೂರು ಸೆ 20 :- ಕೊಳ್ಳೇಗಾಲದಿಂದ ಸತ್ಯಮಂಗಲ ರಾಜ್ಯ ಹೆದ್ದಾರಿ ಸಂಖ್ಯೆ -17 ರಲ್ಲಿ ಅಕ್ರಮವಾಗಿ ಹಾಗೂ ಅನಧಿಕೃತವಾಗಿ ನಿರ್ಮಾಣವಾಗಿರುವ ಅಂಗಡಿಯನ್ನು ತುರ್ತಾಗಿ ತೆರವು ಗೊಳಿಸಬೇಕು ಎಂದು ಆರ್.ಟಿ.ಐ ಕಾರ್ಯಕರ್ತ ಎನ್.ಅಪ್ಪಾಜಿ ಸಂಬಂಧ ಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಹನೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ರಾಜ್ಯದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಕೊಳ್ಳೇಗಾಲ – ಸತ್ಯಮಂಗಲ ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ಹಾಗೂ ಅನಧಿಕೃತ ವಾಗಿ ಹೋಟೆಲ್. ಶೆಡ್ ಅಂಗಡಿಯನ್ನು ನಿರ್ಮಾಣ ಮಾಡಿದ್ದು ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುವವರ ಜೊತೆಗೆ ವನ್ಯಜೀವಿ ಪ್ರಾಣಿಗಳ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸುತ್ತದೆ.
ಅಕ್ರಮವಾಗಿ ತೆರೆಯಲಾಗಿರುವ ಹೋಟೆಲ್ ಶೆಡ್ ಅಂಗಡಿಯನ್ನು ತೆರವು ಮಾಡುವಂತೆ ಸಂಬಂಧಪಟ್ಟ ತಾಲೂಕು ಲೋಕೋಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಹ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿ ಶೆಡ್ ತೆರವು ಗೊಳಿಸದೇ ಬೇಜವಾಬ್ದಾರಿ ಹಾಗೂ ಕರ್ತವ್ಯ ಲೋಪವೆಸಗಿರುತ್ತಾರೆ.
ಈ ಅಕ್ರಮವಾಗಿ ನಿರ್ಮಾಣ ವಾಗಿರುವ ಹೋಟೆಲ್ ಶೆಡ್ ಅಂಗಡಿಯಿಂದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆ ಉಂಟಾಗಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮತ್ತು ಪಕ್ಕದಲ್ಲೇ ಬಿಳಿಗಿರಿ ರಂಗಸ್ವಾಮಿ ವನ್ಯ ಜೀವಿ ವಲಯದ ಅರಣ್ಯವಿದ್ದು. ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬಂದು ಹೋಟೆಲ್‍ನಲ್ಲಿ ಬಿಸಾಡುವ ಪ್ಲಾಸ್ಟಿಕ್ ಇನ್ನಿತರೆ ಆಹಾರ ಪದಾರ್ಥಗಳಿಂದ ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾಗಲಿದೆ.
ಮಾನವ ಮತ್ತು ವನ್ಯ ಜೀವಿಗಳ ರಕ್ಷಣೆಯ ಉದ್ದೇಶದಿಂದ ತುರ್ತಾಗಿ ಕಾನೂನು ಕ್ರಮ ಜರುಗಿಸಿ ಅಕ್ರಮ ವಾಗಿ ರಾಜ್ಯ ಹೆದ್ದಾರಿಯಲ್ಲಿ ಆಕ್ರಮವಾಗಿ ತಲೆ ಎತ್ತಿರುವ ಹೋಟೆಲ್ ಅಂಗಡಿಯನ್ನು ತೆರವು ಗೊಳಿಸಬೇಕಾಗಿದೆ ಎಂದು ಸಂಬಂಧ ಪಟ್ಟ ಮೇಲಾಧಿಕಾರಿಗಳು 1. ಪ್ರಧಾನ ಇಂಜಿನಿಯರ್. ಯೋಜನೆ ಮತ್ತು ರಸ್ತೆಗಳ ಅಸ್ತಿ ನಿರ್ವಹಣಾ ಕೇಂದ್ರ. ಕೆ. ಆರ್. ವೃತ್ತ. ಬೆಂಗಳೂರು.
