ಡೇರಿಗಳು ರೈತರಿಗೆ ವರದಾನ: ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.20: ತಾಲ್ಲೂಕಿನ ಜೈನ್ನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಜೆ.ಸಿ.ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾಸಭೆಯನ್ನು ಶಾಸಕರು ಹಾಗೂ ಮನ್ ಮುಲ್ ನಿರ್ದೇಶಕರಾದ ಹೆಚ್.ಟಿ.ಮಂಜು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು.ಬಳಿಕ ಮಾತನಾಡಿದ ಹೆಚ್.ಟಿ.ಮಂಜು ಅವರು ಹಾಲಿನ ಡೇರಿಗಳು ರೈತರ ಅಭಿವೃದ್ದಿಗೆ ಹೆಚ್ಚು ವರದಾನವಾಗಿವೆ. ರೈತರಿಂದ ಖರೀದಿಸಿದ ಹಾಲಿಗೆ ಪ್ರತಿ ವಾರ ರೈತರ ಮನೆ ಬಾಗಿಲಿಗೆ ಹೋಗಿ ಹಾಲು ಪೂರೈಕೆಯ ಹಣವನ್ನು ನೀಡಲಾಗುತ್ತಿದೆ. ಮಳೆ ಇಲ್ಲದೇ ಕೃಷಿಯಲ್ಲಿ ನಷ್ಟವಾದರೂ ಆಗಬಹುದು. ಆದರೆ ಹೈನುಗಾರಿಕೆಯಲ್ಲಿ ನಷ್ಟವಾಗುವುದಿಲ್ಲ. ಆದ್ದರಿಂದ ರೈತರು ಕೃಷಿಯ ಜೊತೆಗೆ ಉಪಕಸುಬು ಹೈನುಗಾರಿಕೆ ಸೇರಿದಂತೆ, ಮೇಕೆ ಸಾಕಾಣಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳನ್ನು ಕೈಗೊಂಡು ಖಚಿತ ಆಧಾಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಕಮಲಮ್ಮ, ನಿರ್ದೇಶಕರಾದ ಮನು, ಲೋಹಿತಾಶ್ವ, ಅಶೋಕ್, ತಿಮ್ಮಪ್ಪಗೌಡ, ರಾಘವೇಂದ್ರ, ಸಚಿನ್, ಲಕ್ಷ್ಮಮ್ಮ, ಮರಿಲಿಂಗ, ಮುಕುಂದ, ಸಂಘದ ಕಾರ್ಯದರ್ಶಿ ಕೆ.ಎಸ್.ವೀಣಾ, ಹಾಲು ಪರೀಕ್ಷಕ ರಮೇಶ್, ಚಂದನ್, ಚಂದ್ರೇಗೌಡ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ನೂರಾರು ಶೇರುದಾರರು ಉಪಸ್ಥಿತರಿದ್ದರು.