ಕಾಂಗ್ರೆಸ್ ಅಭ್ಯರ್ಥಿ ಪರ ಮರಿಗೌಡ, ವಿಜಯಕುಮಾರ್ ಪ್ರಚಾರ
ಸಂಜೆವಾಣಿ ನ್ಯೂಸ್
ಮೈಸೂರು: ಏ.10:- ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.44, 45 ಹಾಗೂ 46 ನೇ ವಾರ್ಡಿನಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಕಾಂಗ್ರೆಸ್ ಮುಖಂಡರ ಜತೆಗೂಡಿ ಮತಯಾಚನೆ ನಡೆಸಿದರು.
44 ನೇ ವಾರ್ಡಿನ ಶ್ರೀ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಜನರ ಬಳಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ ನಮ್ಮ ಪಕ್ಷದ ಅಭ್ಯರ್ಥಿ ಲಕ್ಷ್ಮಣ್ ನಿಮ್ಮ ಬಳಿ ಮತಯಾಚನೆ ಮಾಡಲು ಬಂದಿದ್ದಾರೆ. ಹಬ್ಬದ ಸಂದರ್ಭದಲ್ಲೂ ಕೂಡ ನಮ್ಮ ಪಕ್ಷದ ಯೋಜನೆ ಗಳನ್ನು ನೋಡಿ ಹೆಚ್ಚಿನ ಸಂಖ್ಯೆಯಲ್ಲಿ ನೀವು ಬಂದಿದ್ದೀರಾ. ಲಕ್ಷ್ಮಣ್ ರವರು ನಮ್ಮ ಪಕ್ಷದ ಒಬ್ಬ ನಿಷ್ಠಾವಂತ ಹೋರಾಟಗಾರ. ನಮ್ಮ ಸಿಎಂ ಡಿಸಿಎಂ ಸಾಮಾನ್ಯ ಕಾರ್ಯಕರ್ತರನ್ನು ನಿಮ್ಮ ಮುಂದೆ ನಿಲ್ಲಿಸಿದ್ದಾರೆ. ನಮ್ಮ ಪಕ್ಷದ ಲಕ್ಷ್ಮಣ್ ರವರಿಗೆ ಮತ ಕೇಳುವ ನೈತಿಕ ಹಕ್ಕು ಇದೆ. 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ.ಈ ಎಲ್ಲವೂ ಕೂಡ ನಿಮಗೆ ಉಪಯೋಗವಾಗಿದೆ. ರಾಜ್ಯದ ಜನರು ಸುಖವಾಗಿ ಬದುಕಲು ಗ್ಯಾರಂಟಿ ಯೋಜನೆ ಉಪಯೋಗವಾಗಿದೆ. ಇನ್ನು ಮುಂದೆ ಕೇಂದ್ರದಿಂದ ಗ್ಯಾರಂಟಿ ಯೋಜನೆಗಳು ಬರಲಿದೆ.
ಎಲ್ಲಾ ಮುಖಂಡರು ಪಕ್ಷದ ಸಂಘಟನೆ ಮಾಡಿದ್ದೇವೆ. ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ಹೋಗಿ ಯೋಜನೆಗಳ ಬಗ್ಗೆ ತಿಳಿಸಿದ್ದು, ಯುಗಾದಿ ಹಬ್ಬದಂದು ಪೂಜೆ ಸಲ್ಲಿಸಿದ್ದೇವೆ ಜನರು ನಮ್ಮ ಜೊತೆ ಇದ್ದಾರೆ ಲಕ್ಷ್ಮಣ್ ಗೆಲುವು ಖಚಿತ ಎಂದು ಹೇಳಿದ್ದರು.
ಗ್ರಾಮಾಂತರ ಅಧ್ಯಕ್ಷರು ಬಿ ಜೆ.ವಿಜಯಕುಮಾರ್ ರವರು ಮಾತನಾಡಿ,3 ಲಕ್ಷ ಮತದಾರರು ಈ ವಾರ್ಡಿನಲ್ಲಿ ಇದ್ದಾರೆ. ನಾನು ವಿದ್ಯಾರ್ಥಿಯಾಗಿದ್ದಾಗ ಚಿಕ್ಕಣ್ಣ ರವರ ಜೊತೆ ಕೆಲಸ ಮಾಡಿದ್ದೇವೆ. ನನಗೆ ಈ ಭಾಗದಲ್ಲಿ ಹೆಚ್ಚು ಒಡನಾಟವಿದೆ ಮತ್ತು ದೊಡ್ಡ ಮಟ್ಟದ ಸಂಪರ್ಕ ಇದೆ. ತಾವೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಕೇಂದ್ರದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಡಲು ಸಿದ್ಧತೆ ನೆಡೆದಿದೆ. ಹಳೆ ಯೋಜನೆ ಚಾಲ್ತಿಯಲ್ಲಿರುತ್ತೇವೆ ಮುಂದೆ ಹೊಸ ಯೋಜನೆಗಳು ಸೇರುತ್ತಾ ಹೋಗುತ್ತವೆ. ಈ ಚುನಾವಣೆಯಲ್ಲಿ ನಮ್ಮ ಲಕ್ಷ್ಮಣ್ ಗೆಲ್ಲಬೇಕು ಪಾರ್ಲಿಮೆಂಟಿಗೆ ಹೋಗಲೇಬೇಕು. ಈ ವಾರ್ಡಿನ ಜನರು ಅತ್ಯಂತ ಲೀಡ್ ಕೊಡಬೇಕೆಂದು ಮತಯಾಚನೆ ಮಾಡಿದ್ದರು.
ಈ ಸಂದರ್ಭದಲ್ಲಿ ಎಂ.ಲಕ್ಷ್ಮಣ್ ರವರು ಮಾತನಾಡಿ, ನಮ್ಮ ಸಿಎಂ ಮತ್ತು ಡಿಸಿಎಂ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಸಾಹೇಬರೂ ನನ್ನನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ. ಕಳೆದ ಬಾರಿ ಶೇ. 67 ರಷ್ಟು ಮತದಾನ ವಾಗಿತ್ತು. ಈ ಬಾರಿ ಆ ರೀತಿ ನಡೆಯಬಾರದು. ನಮ್ಮ 5 ಗ್ಯಾರಂಟಿ ಯೋಜನೆ ಗಳನ್ನು ಜನರು ಉಪಯೋಗಿಸುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆ ಬಿಡುಗಡೆಗೆ ಮುನ್ನವೆ ಪ್ರತಿ ಮನೆ ಮನೆಗೂ ಗ್ಯಾರಂಟಿ ಕಾರ್ಡ್ ತಲುಪಿಸಿದ್ದೇವು. ಗೆದ್ದ ನಂತರ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ.90ರಷ್ಟು ಜನರಿಗೆ ಗ್ಯಾರಂಟಿ ಯೋಜನೆ ತಲುಪಿದೆ.ಮಹಿಳೆಯರು ಫ್ರೀ ಬಸ್ ನಲ್ಲಿ ಓಡಾಟ ಮಾಡುತ್ತಿದ್ದಾರೆ.2 ಸಾವಿರ ದುಡ್ಡು ಬರ್ತಿದೆ. ನಾವು ಏನು ಆಶ್ವಾಸನೆ ಕೊಟ್ಟಿದ್ದೂ ಅದನ್ನು ಈಡೇರಿಸಿದ್ದೇವೆ. ಮತ್ತೆ 5 ನ್ಯಾಯ ಗಳನ್ನು ಕೇಂದ್ರದಲ್ಲಿ ಸಹಿ ಮಾಡಿರುವ ಗ್ಯಾರಂಟಿ ಕಾಡ್ರ್ಗಗಳನ್ನು ನಿಮ್ಮ ಮನೆಗೆ ತಲುಪಿಸುತ್ತೇವೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 5 ನ್ಯಾಯಗಳು ನಿಮ್ಮ ಮನೆಗೆ ತಲುಪಿಸುತ್ತೇವೆ. ಅದಕ್ಕೆ ನಾವು ಬದ್ಧರಾಗಿದ್ದೇವೆ. ಮಹಿಳೆಯರಿಗೆ 1 ಲಕ್ಷ ವರ್ಷಕ್ಕೆ ರೈತರಿಗೆ ಕೂಲಿ 400ಕ್ಕೆ ಏರಿಕೆ ಮಾಡುತ್ತೇವೆ. ನೀವು ಬಿಜೆಪಿ ಗೆಲ್ಲಿಸಿದ್ದರೆ ಈ ಗ್ಯಾರಂಟಿ ಯೋಜನೆ ನಿಲ್ಲುತ್ತದೆ. ನಮ್ಮ ಪಕ್ಷ ಯಾವಾಗಲೂ ದೀನದಲಿತರ ಪಕ್ಷ ಬಡವರ ಪರವಾಗಿ ನಿಂತಿರುವ ಪಕ್ಷ. ನೀವು ಬಿಜೆಪಿ ಯವರನ್ನು ಪ್ರಶ್ನೆ ಕೇಳಿದರೆ ಮೋದಿ ಮೋದಿ ಎಂದು ಹೇಳುತ್ತಾರೆ. ನಾನು ನಿಮ್ಮ ತರ ಸಾಮಾನ್ಯ ಕಾರ್ಯಕರ್ತ, ನಾನು ಬೀದಿಯಲ್ಲಿ ಇರುವ ವ್ಯಕ್ತಿ ಯಾವಾಗ ಬೇಕಾದರೂ ಸಿಗುವ ವ್ಯಕ್ತಿ. ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿಕೊಂಡು ಮತಯಾಚನೆ ಮಾಡಿದ್ದರು.
46ನೇ ವಾರ್ಡಿನ ಪ್ರಚಾರ: ದಟ್ಟಗಳ್ಳಿಯ ವಾರ್ಡ್ ನಂಬರ್ 46ರಲ್ಲಿ ಓಂ ಶ್ರೀ ಸಾಯಿ ಟ್ರಸ್ಟ್ ಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಮಹಾತ್ಮ ಗಾಂಧೀಜಿ ರವರ ಫೆÇೀಟೋಗೆ ಪುಷ್ಪಾರ್ಚನೆ ಮಾಡಿದ್ದರು ಮತದಾನದ ಮಹತ್ವ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ಚಾಮುಂಡೇಶ್ವರಿ ವ್ಯಾಪ್ತಿಗೆ ನಾಲ್ಕು ವಾರ್ಡಗಳು ಬರುತ್ತದೆ. ಈ ವಾರ್ಡಿನಲ್ಲಿ ಅತಿ ಹೆಚ್ಚು ಲೀಡ್ ಕೊಡುತ್ತೀರಿ ಎಂಬ ನಂಬಿಕೆಯಿದೆ. ಈ ಬಾರಿ ಎಲ್ಲಾ ಕ್ಷೇತ್ರದಲ್ಲೂ ನಮ್ಮ ಎಂಎಲ್‍ಎಗಳು ಇದ್ದಾರೆ. ಹೀಗಾಗಿ ಈ ಬಾರಿ ಅತ್ಯಂತ ಲೀಡ್ ನಲ್ಲಿ ಗೆಲ್ಲಿಸಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮಾತನಾಡಿ, ದೇಶದಲ್ಲಿ ಮಾರ್ವಾಡಿಗಳು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ದೇಶದ ಪರಿಸ್ಥಿತಿ ಹೇಗಿದೆ ಎಂದು ನೀವೇ ನೋಡಿದ್ದೀರಾ?. ದೇಶದಲ್ಲಿ ಬಣ್ಣ ಬಣ್ಣವಾಗಿ ಮಾತು ತೋರಿಸಿ ಯುವಕರಿಗೆ ಕೆಲಸ ಸಿಗದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಬಿಜೆಪಿಯವರು ಸಾಮಾನ್ಯ ವರ್ಗದ ಯುವಕರು ಯಾವ ಕೆಲಸ ಮಾಡುತ್ತಿದ್ದಾರೆ. ಒಂದು ಹೋಟೆಲ್ ಗೆ ಹೋದರೆ ಹಿಂದಿ ಮಾತನಾಡುವವರನ್ನು ತಂದಿದ್ದಾರೆ. ಯುವಕರಿಗೆ ಆಗುತ್ತಿರುವ ಅನ್ಯಾದ ಬಗ್ಗೆ ಧ್ವನಿ ಎತ್ತಲು ಯಾರು ಇಲ್ಲ. ಹೀಗಾಗಿ ಜನರು ಬದಲಾವಣೆ ತರಬೇಕು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ನಾವು ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆ ಕೊಟ್ಟು ಹೋಗುವವನಲ್ಲ ಅದನ್ನು ಜಾರಿ ಮಾಡುವವರು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ರವರ ಕೊಡುಗೆಗಳು ಮನೆ ಮನೆಗೂ ಭಿತ್ತಿಪತ್ರಗಳ ಮೂಲಕ ತಲುಪ ಬೇಕು. ನಾವು ಕೆಲಸ ಮಾಡಿದ್ದೇವೆ ದಯಮಾಡಿ ನಿಮ್ಮ ಬಳಿ ಕೂಲಿ ಕೇಳುತ್ತಿದ್ದೇವೆ .ಹೀಗಾಗಿ ನಂಗೊಂದು ಅವಕಾಶ ಮಾಡಿಕೊಡಿ ಎಂದು, ಕೇಂದ್ರದ 5 ನ್ಯಾಯ ಯೋಜನೆಗಳ ಭಿತ್ತಿಪತ್ರ ತೋರಿಸಿ ಮತಯಾಚನೆ ಮಾಡಿದ್ದರು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಕೆ.ಮರೀಗೌಡ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್. ಗೌಡ ಮತ್ತು ವಾರ್ಡಿನ ಅಧ್ಯಕ್ಷ ವಿಕ್ಕಿವಾಸು,ಮಹಿಳಾ ಸದ್ಯಸರಾದ ರಾಣಿಪ್ರಭಾ, ಹರೀಶ್ ಹಾಗೂ ಮುಖಂಡರು ಹಾಜರಿದ್ದರು.
45 ನೇ ವಾರ್ಡಿನಲ್ಲಿ ಪ್ರಚಾರ:
ಮೈಸೂರು ಕೊಡಗು ಲೋಕ ಸಭಾ ಅಭ್ಯರ್ಥಿ ಎಂ ಲಕ್ಷ್ಮಣ್ ವಾರ್ಡ್ ನಂಬರ್ 45 ನಿವೇದಿತಾ ನಗರದಲ್ಲಿ ಜನ ಸಂಪರ್ಕ ಸಭೆಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಲಕ್ಷ್ಮಣ್ ಮಾತನಾಡಿ, ಜನರ ಬಳಿ ಕೈ ಮುಗಿದು ತಮ್ಮಲ್ಲಿ ಮತ ಕೇಳಿಕೊಳ್ಳುತ್ತೇನೆ. ಈ ಬಾರಿ ನನಗೊಂದು ಅವಕಾಶ ಮಾಡಿಕೊಡಿ ತಮ್ಮ ಸೇವೆಯಲ್ಲಿ ನಿರತನಾಗಿ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿಕೊಂಡರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ ವಿಜಯ್ ಕುಮಾರ್ ಮಾತನಾಡಿ, 8 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿ ಈಗಾಗಲೇ ಮತಯಾಚನೆ ಮಾಡಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸ ಬೇಕು. ಮುಖ್ಯಮಂತ್ರಿ ಅಭಿವೃದ್ದಿ ಕಾರ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ. ಮತ್ತೊಮ್ಮೆ ನಮಗೆ ಅವಕಾಶ ಮಾಡಿಕೊಡಿ ಎಂದು ಲಕ್ಷ್ಮಣ್ ರವರ ಪರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮುಡ ಅಧ್ಯಕ್ಷ ಮರೀಗೌಡ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್. ಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜವರಪ್ಪ, ಅರುಣ್ ಕುಮಾರ್, ಬ್ಲಾಕ್ ಅಧ್ಯಕ್ಷ ಗುರುಸ್ವಾಮಿ, ಮಾಜಿ ಮೇಯರ್ ಚಿಕ್ಕಣ್ಣ ಸೇರಿ ಮತ್ತಿತರು ಹಾಜರಿದ್ದರು.