ಜಿಲ್ಲೆಯಲ್ಲಿ ಹೊನ್ನೇರು ಸಂಭ್ರಮ
ಚಾಮರಾಜನಗರ, ಏ.14:- ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಯುಗಾದಿ ಪ್ರಯುಕ್ತರೈತರು ಹೊನ್ನೇರುಕಟ್ಟಿ ಕೃಷಿ ಚುಟುವಟಿಕೆಯನ್ನು ಆರಂಭಿಸಿದ್ದಾರೆ. ಬಹುಪಾಲು ಹಳ್ಳಿಗಳಲ್ಲಿ ಯುಗಾದಿಯಂದು ಹೊನ್ನೇರುಕಟ್ಟುವ ಸಂಪ್ರದಾಯವನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಅದರಲ್ಲೂಇಲ್ಲಿಯದೊಡ್ಡರಾಯ ಪೇಟೆ, ಹಂಗಳ, ಹೆಬ್ಬಸೂರು, ಜ್ಯೋತಿಗೌಡನಪುರ, ಹೊನ್ನೂರು, ಹನೂರುತಾಲ್ಲೂಕಿನರಾಮಾಪುರ, ಪೆÇನ್ನಾಚಿ ಮೊದಲಾದ ಗ್ರಾಮಗಳಲ್ಲಿ ಇಂದು ಹೊನ್ನೇರುಕಟ್ಟಲಾಗುತ್ತದೆ.
ಏನಿದು ಹೊನ್ನೇರು ಸಂಪ್ರದಾಯ?:
ಯುಗಾದಿ ಶುರುವಾಗುತ್ತಿದ್ದಂತೆ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಎತ್ತುಗಳು ಮತ್ತುಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿಸುವ ಸಂಪ್ರದಾಯಕ್ಕೆ ಹೊನ್ನೇರುಎಂದುಕರೆಯುತ್ತಾರೆ. ಹೊನ್ನೇರುಅನ್ನದಾತರಚಿನ್ನದತೇರಾಗಿದೆ. ಈಗ ಟ್ರಾಕ್ಟರ್ ಹಾಗೂ ಯಂತ್ರೋಪಕರಣಗಳು ಬಂದಿರುವುದರಿಂದ ಎತ್ತುಗಳು ಹಾಗೂ ಎತ್ತಿನ ಗಾಡಿಗಳು ಮರೆಯಾಗಿದೆ. ಆದರೂ ಸಹ ಬಹುತೇಕಗ್ರಾಮದಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನೂತನ ವರ್ಷದ ಮೊದಲ ದಿನ ರೈತರು ಆ ವರ್ಷದ ಕೃಷಿ ಚಟುವಟಿಕೆ ವಿಧಿವತ್ತಾಗಿಅಡಿಯಿಡುವ ಸಂಪ್ರದಾಯತಲತಲಾಂತರದಿಂದ ನಡೆದುಕೊಂಡು ಬಂದಿದೆ.
ಎತ್ತುಗಳಿಗೆ ಅಲಂಕಾರ:
ಹೊನ್ನೇರಿನ ವಿಶೇಷತೆಎಂದರೆ ಸೂರ್ಯೋದಯಕ್ಕು ಮುನ್ನರೈತರುತಮ್ಮ ಎತ್ತುಗಳನ್ನು ತೊಳೆಯುತ್ತಾರೆ. ಬಳಿಕ ಎತ್ತುಗಳ ಕೊಂಬುಗಳಿಗೆ ಹೊಂಬಾಳೆ, ಕೊರಳಿಗೆ ಬಿಳಿಗಣಗಲೆ ಹೂವು, ಮಂಡೆ ಹುರಿಕಟ್ಟಿಅಲಂಕರಿಸುತ್ತಾರೆ.
ಎತ್ತಿನ ಗಾಡಿಗಳಿಗೂ ಸಿಂಗಾರ:
ಎತ್ತಿನ ಗಾಡಿಗಳನ್ನು ಸಹ ಬಣ್ಣ-ಬಣ್ಣದಗಳಿಂದ ಶೃಂಗರಿಸಿ, ಮಾವಿನ ಎಲೆ, ಬಾಳೆ ಕಂದು, ಹೊಂಬಾಳೆಗಳನ್ನು ಕಟ್ಟಿ ಶೃಂಗರಿಸಿದ ಎತ್ತಿನ ಗಾಡಿಗಳಿಗೆ ಸಾಂಕೇತಿಕವಾಗಿಒಂದಿಷ್ಟುಕೊಟ್ಟಿಗೆಗೊಬ್ಬರತುಂಬುತ್ತಾರೆ. ಬಳಿಕ ನೊಗ ಹೂಡಿದ ಎತ್ತುಗಳು ಹಾಗೂ ಎತ್ತಿನ ಗಾಡಿಗಳನ್ನು ಮಂಗಳವಾದ್ಯಗಳೊಂದಿಗೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಹೊನ್ನೇರುಗಳ ಮೆರವಣಿಗೆ ಸಾಗುತ್ತಿದ್ದಾಗ ಮುತ್ತೈದೆಯರು ಪೂಜೆ ಸಲ್ಲಿಸುತ್ತಾರೆ. ಅನಂತರರೈತರುತಮ್ಮ ಜಮೀನುಗಳಲ್ಲಿ ಗೊಬ್ಬರ ಸುರಿದು, ಸಾಂಕೇತಿಕವಾಗಿ ಉಳುಮೆ ಮಾಡಿ ಕೃಷಿ ಚಟುವಟಿಕೆಆರಂಭಕ್ಕೆ ಮುನ್ನುಡಿ ಬರೆಯುತ್ತಾರೆ.
ಹಬ್ಬಕ್ಕೆ ಭೂರಿ ಭೋಜನ:
ಗೊಬ್ಬರ ಸಿಂಪಡಿಸಿ ಬಳಿಕ ಮನೆಗೆ ಹಿಂತಿರುಗುವರೈತರು ಮನೆಯಲ್ಲಿಇಡ್ಲಿ, ಹೋಳಿಗೆ ಹಾಗೂ ಪಾಯಸದ ಭೋಜನ ಸವಿದು ಹಬ್ಬದ ಸಂಭ್ರಮವನ್ನುಇನ್ನಷ್ಟು ಹೆಚ್ಚಿಸುತ್ತಾರೆ. ಹೊನ್ನೇರುಅನ್ನದಾತನರಥವೇಆಗಿದ್ದುಇಡೀಕುಟುಂಬದವರು ಹೊಸ ಬಟ್ಟೆ ಧರಿಸಿ ಚಿಣ್ಣರನ್ನು ಕೃಷಿ ಚಟುವಟಿಕೆಯಲ್ಲಿತೊಡಗುವಂತೆ ಮಾಡುತ್ತಾರೆ. ರೈತನ ಅವಿಭಾಜ್ಯಅಂಗವಾದಜೋಡೆತ್ತಿಗೆಇಂದು ವಿಶೇಷ ಸ್ಥಾನ ಸಿಗಲಿದ್ದು, ಅದಕ್ಕೆ ಮಕ್ಕಳ ಕೈಯಿಂದ ಪೂಜೆ ಸಲ್ಲಿಸುವುದು ವಿಶೇಷ. ವರ್ಷದ ಮೊದಲ ದಿನವಾದಇಂದುಜಿಲ್ಲೆಯರೈತರು ವಿಧಿವತ್ತಾಗಿ ಕೃಷಿಗೆ ಅಡ್ಡಿಯಿಟ್ಟಿದ್ದಾರೆ, ‘ಹೊನ್ನೇರು’ ರೈತರಯುಗಾದಿ ಸಂಭ್ರಮ ಹೆಚ್ಚಿಸಿದೆ.