ಡಾ.ಬಾಬು ಜಗಜೀವನರಾಮ ಆಹಾರ ಉತ್ಪಾದನೆಯಲ್ಲಿ ಮಾಡಿದ ಕ್ರಾಂತಿ ಅವಿಸ್ಮರಣೀಯ
ಕಲಬುರಗಿ,ಏ.10-ದೇಶದ ಉಪ ಪ್ರಧಾನಿಯಾಗಿ ಡಾ.ಬಾಬು ಜಗಜೀವನರಾಮ ಅವರು ಆಹಾರ ಉತ್ಪಾದನೆಯಲ್ಲಿ ಮಾಡಿದ ಸಮಗ್ರ ಕ್ರಾಂತಿ ಮಾದರಿಯಾದುದ್ದಾಗಿದೆ ಎಂದು ಶಾಸಕ ಬಸರವರಾಜ ಮತ್ತಿಮೂಡ ಹೇಳಿದರು.
ಡಾ.ಬಾಬು ಜಗಜೀವನರಾಮ ಅವರ 117ನೇ ಜಯಂತಿ ಅಂಗವಾಗಿ ಅವರ ಪುತ್ಥಳಿ ಆವರಣದಲ್ಲಿ ಹಮ್ಮಿಕೊಂಡಿದ್ದ ನಾಗಪ್ಪ ಎಸ್.ಬೆಳಮಗಿ ಅವರ ಡಾ.ಬಾಬು ಜಗಜೀವನರಾಮ ಅವರ ಜೀವನ ಚರಿತ್ರೆ ಕವನ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಿಗ ಸಮಾಜದ ಮುಖಂಡ ಶ್ಯಾಮ್ ನಾಟಿಕಾರ ಅಧ್ಯಕ್ಷತೆ ವಹಿಸಿದ್ದರು. ದಲಿತ ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಲಿಂಗರಾಜ ತಾರಫೈಲ್, ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ನ್ಯಾಯವಾದಿಗಳಾದ ರಾಜೆ ಶಿವಶರಣಪ್ಪ, ಬಸಣ್ಣ ಸಿಂಗೆ, ಶಿಕ್ಷಕ ಶಿವಶರಣಪ್ಪ ವಚ್ಚಾ, ಯುಗಾಂತರಿ, ಸಿ.ಎಸ್.ಮಾಲಿಪಾಟೀಲ, ಶಿವಕುಮಾರ ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಹಾನಗರ ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಉಪಸ್ಥಿತರಿದ್ದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಎಸ್.ಎಸ್.ಬರಗಾಲಿ, ಹಣಮಂತ ಘಂಟೆಕರ, ಭೀಮರಾಯ ದೊಡ್ಡಮನಿ, ಶಿವಶಂಕರ ಬಿ., ಎಂ.ಎನ್.ಸುಗಂಧಿ, ರಮೇಶ ಬೆಳಮಗಿ, ಅರವಿಂದ ಬಿಳಾರ, ಸುಧೀರ ಆನೂರ ಕವಿತೆ ವಾಚಿಸಿದರು. ನಿವೃತ್ತ ಉಪನ್ಯಾಸಕ ಡಾ.ಕೆ.ಎಸ್.ಬಂಧು ಸಿದ್ದೇಶ್ವರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.