ಜೀವನದಲ್ಲಿ ಸದ್ಗುಣ ಪ್ರಾಪ್ತಿಗೆ ಶರಣರ ವಾಣಿ ಆಲಿಸಿ
ಸಂಜೆವಾಣಿ ವಾರ್ತೆ
ಔರಾದ್ :ಏ.10: ಜೀವನದಲ್ಲಿ ಸದ್ಗುಣಗಳನ್ನು ಬೆಳೆಸಿಕೊಂಡು, ಶರಣರ ವಾಣಿಗಳನ್ನು ಆಲಿಸಿ ಬದುಕು ಹಸನು ಮಾಡಿಕೊಳ್ಳಬೇಕು ಎಂದು ತಾಪಂ ಎಡಿ ರತಿಕಾಂತ ನೇಳಗೆ ಹೇಳಿದರು.
ರವಿವಾರ ತಾಲೂಕಿನ ವಡಗಾಂವ(ದೇ) ಅಂಬಿಕಾ ಕೋಡಗೆ ಪರಿವಾರದಿಂದ ಜರುಗಿದ 64ನೇ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಜೀವನದಲ್ಲಿ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಜ್ಜನರ ಸಂಗ ಮಾಡಬೇಕು. ಇದರಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯಲಿದೆ. ಪೆÇೀಷಕರು ತಮ್ಮ ಮಕ್ಕಳನ್ನು ಉತ್ತಮ ಪರಿಸರದಲ್ಲಿ ಬೆಳೆಸಿ ಗುರು, ಹಿರಿಯರು, ದೇವರು, ಧರ್ಮದ ಬಗ್ಗೆ ಉತ್ತಮ ಮನೋಭಾವ ಮೂಡುವಂತ ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಪತ್ರಕರ್ತ ಮಲ್ಲಪ್ಪ ಗೌಡಾ ಮಾತನಾಡಿ, ಬಸವ ಜ್ಯೋತಿ ಕರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ಉತ್ತಮವಾಗಿ ಹಲವಾರು ತಿಂಗಳುಗಳಿಂದ ನಡೆದುಕೊಂಡು ಬಂದಿರುವುದು ಶ್ಲಾಘನೀಯ. ಇಂದಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಮೋಬಾಯಿಲ್ ಬಂದಿರುವುದರಿಂದ ಮನೆಯಲ್ಲಿನ ಶಾಂತಿ, ನೆಮ್ಮದಿ ಕಳೆದುಹೋಗುತ್ತಿದೆ. ಎಲ್ಲರು ಸಾಮಾಜಿಕ ಜಾಲತಾಣಗಳ ಗುಲಾಮರಾಗಿರುವುದರಿಂದ ಮನೆಯಲ್ಲಿನ ಸಂಸ್ಕಾರ , ಸಮಾನತೆ, ಶರಣರ ವಾಣಿಗಳು ಮಾಯವಾಗುತ್ತಿವೆ. ಇದೇ ಪ್ರಸಂಗ ಮುಂದುವರಿದರೇ ಮುಂದಿನ ಜನಾಂಗಕ್ಕೆ ಶರಣರು ನೀಡಿದ ದಿವ್ಯವಾಣಿಗಳ ಮಾಹಿತಿ ಲಭ್ಯವಾಗದೇ ಬದುಕೇ ಕತ್ತಲೆಯಾಗುವ ಪರಿಸ್ಥಿತಿ ಉಂಟಾಗುತ್ತದೆ. ಆದುದರಿಂದ ಮನೆಯಲ್ಲಿ ಮಕ್ಕಳಿಗೆ ಸಮಯವನ್ನು ಮೀಸಲಿಡಿ, ಅವರಿಗೆ ಶರಣರ ವಾಣಿ, ಧಾರ್ಮಿಕ ಗೃಂಥಗಳು, ಭಜನೆ, ವಚನಗಳ ಪಠನೆ ಮಾಡಿಸಿ , ಭವಿಷ್ಯ ರೂಪಿಸಿಕೊಡುವ ಶಿಕ್ಷಣ ಕೊಡಿಸಿ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಮಾತನಾಡಿದರು.ಇದೇ ವೇಳೆ ಗ್ರಾಮದ ಯುವ ತರುಣ ಸಮಾಜ ಸೇವಕ ಸೂರ್ಯಕಾಂತ್ ಪಾಟೀಲ್ ಅವರಿಗೆ ಸನ್ಮಾನಿಸಲಾಯಿತು. ಸತೀಷ ಕೋಡಗೆ ಅವರಿಂದ ದಾಸೋಹ ವ್ಯವಸ್ಥೆ ಜರುಗಿತು. ಗ್ರಾಪಂ ಅಧ್ಯಕ್ಷೆ ರಾಜಕುಮಾರ್ ಹೇಡೆ, ಸಿದ್ದಯ್ಯ ಸ್ವಾಮಿ, ರಮೇಶ ಭೂಶೆಟ್ಟೆ, ಗ್ರಾಪಂ ಸದಸ್ಯ ರವಿ ಗಂಗಾ, ಸತೀಷ ಕೋಡಗೆ, ಹಣಮಂತ ನೇಳಗೆ, ಉಮೇಶ ಲಕ್ಕಾ, ಮಹಾದೇವ, ಚನ್ನಪ್ಪ, ಬಸವ ಚಿಕಲಿಂಗೆ, ಶಾರದಾಬಾಯಿ, ಅಂಬಿಕಾ, ಸೂರ್ಯಕಾಂತ, ಹಾವಗಿರಾವ್ ಇತರರಿದ್ದರು. ಬಸವ ಚಿಕಲಿಂಗೆ ವಂದಿಸಿ ನಿರೂಪಣೆ ಮಾಡಿದರು.