ಶಾಸಕ ಅಲ್ಲಂಪ್ರಭು ಪಾಟೀಲರಿಂದ ಮುಸಲ್ಮಾನ್‌ ಬಾಂಧವರಿಗೆ ಇಫ್ತಾರ್‌ ಔತಣಕೂಟ
ಕಲಬುರಗಿ:ಏ.8:ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲರ ನೇತೃತ್ವದಲ್ಲಿ ಸೋಮವಾರ ಇಲ್ಲಿನ ಎಂಎಸ್‌ಕೆ ಮಿಲ್‌ನಲ್ಲಿರುವ ಮೂನ್‌ಲೈಟ್‌ ಫಂಕ್ಷನ್‌ ಹಾಲ್‌ನಲ್ಲಿ ಇಫ್ತಾರ್‌ ಔತಣ ಕೂಟ ಏರ್ಪಡಿಸುವ ಮೂಲಕ ರಂಜಾನ್‌ ಹಬ್ಬದ ಶುಭಾಶಯ ಕೋರಲಾಯ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಅಲ್ಲಂಪ್ರಭು ಪಾಟೀಲರು ರಂಜಾನ್‌ ಸೌಹಾರ್ದತೆಯ ಹಬ್ಬವಾಗಿದೆ. ಇದು ಪರಸ್ಪರ ಕೋಮು ಸೌಹಾರ್ದತೆ ಸಂದೇಶ ಸಾರುವ ಮಹತ್ವದ ಹಬ್ಬವಂದರಲ್ಲದೆ ಸಾಮರಸ್ಯವೇ ನಮ್ಮೆಲ್ಲರ ಬದುಕಿನ ಬುನಾದಿಯಾಗಬೇಕು ಎಂದು ಕರೆ ನೀಡಿದರು.
ಕಲಬುರಗಿ ಲೋಕಸಭೆ ಕಣದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ, ಶಾಸಕರಾದ ಎಂ ವೈ ಪಾಟೀಲ್‌, ಸಿಎಂ ಸಲಹೆಗಾರರಾದ ಬಿಆರ್‌ ಪಾಟೀಲ್‌, ಇಲಿಯಾಸ್‌ ಭಾಗವಾನ್‌, ಪಾಲಿಕೆ ಸದಸ್ಯರಾದ ಶೇಖ್‌ ಹುಸೇನ್‌, ಪಾಲಿಕೆ ಸದಸ್ಯ ಖಾಲೀದ್‌ ಹಾಗೂ ಮುಸಲ್ಮಾನ್‌ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಇಫ್ತಾರ್‌ ಕೂಟದಲ್ಲಿ ಪಾಲ್ಗೊಂಡು ಪ್ರರ್ಥನೆ ಸಲ್ಲಿಸಿ ನಂತರ ಹಣ್ಣು, ಹಣ್ಣಿನ ರಸದೊಂದಿಗೆ ಸ್ವಾದಿಷ್ಠ ಭೋಜನ ಸವಿದರು.