ಬಳ್ಳಾರಿಯಲ್ಲಿ  7.60 ಕೋಟಿ  ನಗದು ಬೆಳ್ಳಿ ಚಿನ್ನಾಭರಣ ವಶ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಏ.7: ನಗರದ ಕಂಬಳಿ ಬಜಾರ್ ನಲ್ಲಿನ ಚಿನ್ನದ ವ್ಯಾಪಾರಿ ಮನೆಯಲ್ಲಿ ದಾಖಲೆ ಇಲ್ಲದೆ ಇಟ್ಟಿದ್ದ ಒಟ್ಟು 7.60 ಕೋಟಿ ರೂ ನಗದು, ಬೆಳ್ಳಿ, ಚಿನ್ನಾಭರಣವನ್ನು ಬ್ರೂಸ್ ಪೇಟೆ ಪೊಲೀಸರು ನಿನ್ನೆ ಮಧ್ಯಾಹ್ನ ವಶಪಡಿಸಿಕೊಂಡಿದ್ದಾರೆ.
ತಮಗೆ ದೊರೆತ ಖಚಿತ ಮಾಹಿತಿಯಿಂದ ಪೊಲೀಸರು ನರೇಶ್ ಸೋನಿ ಎಂಬಾತನ ಮನೆಯ ಮೇಲೆ ದಾಳಿ ನಡೆಸಿ. 5ಕೋಟಿ 60 ಲಕ್ಷ ರೂ ನಗದು, 1 ಕೋಟಿ 4 ಲಕ್ಷ ರೂ ಮೌಲ್ಯದ 3 ಕಿಲೋ ಚಿನ್ನ. 42 ಲಕ್ಷ ರೂ ಮೌಲ್ಯ್  ಬೆಳ್ಳಿ ಆಭರಣಗಳನ್ನು  ವಶಪಡಿಸಿಕೊಂಡಿದ್ದಾರೆ.
ನರೇಶ್ ಸೋನಿ ನಗರದ ಎಲ್ ಎನ್ ಟೆಂಪಲ್ ಸ್ಟ್ರೀಟ್ ನಲ್ಲಿ ಹೇಮ ಜ್ಯುಲೆರ್ಸ್ ಹೆಸರಲ್ಲಿ ಮಳಿಗೆ ಇಟ್ಟುಕೊಂಡು ಚಿಲ್ಲರೆ ವ್ಯಾಪಾರ ಮತ್ತೊಂದು ಕಡೆ ಸಗಟಾಗಿ ಗಟ್ಟಿ ಚಿನ್ನ ಬಿಸ್ಕತ್ ವ್ಯಾಪಾರ ಮಾಡುತ್ತಿದ್ದನಂತೆ.
ಜೊತೆಗೆ ಈ‌ ಹಿಂದೆ ಈತ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೆಆರ್ ಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದನಂತೆ.
ನಿನ್ನೆ ನಗರದ ಎರೆಡು ಚಿನ್ನಾಭರಣ ವ್ಯಸಪಾರಿ ಅಂಗಡಿಗಳ ಮೇಲೆ ಮಾರಾಟ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರಿಂದ. ತಮ್ಮ  ಅಂಗಡಿಯಲ್ಲಿದ್ದುದನ್ನು ಮನೆಗೆ ತೆಗೆದುಕೊಂಡು ಹೋಗಿ ಇಟ್ಟಿರಬೇಕು.  ಯಾರೋ ಆಗದವರು ಈ  ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು.  ಎಸ್ಪಿ ರಂಜಿತ್ ಕುಮಾರ್ ಬಂಡಾರು ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.